ನವದೆಹಲಿ: ರಷ್ಯಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಮಾನವ ಕಳ್ಳಸಾಗಾಣೆ ಮಾಡುತ್ತಿರುವ ಜಾಲವನ್ನು ಸಿಬಿಐ ಭೇದಿಸಿದೆ.ಗುರುವಾರ ದೇಶದ 7 ನಗರಗಳಲ್ಲಿ ನಡೆಸಿದ ದಾಳಿಯಲ್ಲಿ ಭಾರತೀಯರನ್ನು ಕಳ್ಳಸಾಗಣೆ ಮಾಡುವ ಜಾಲವನ್ನು ಭೇದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಸಂಬಳದ ಉದ್ಯೋಗಗಳನ್ನು ನೀಡುವ ನೆಪದಲ್ಲಿ ರಷ್ಯಾ ದೇಶಕ್ಕೆ ಹೋಗುವಂತೆ ಮೋಸದಿಂದ ಪುಸಲಾಯಿಸಿ ಅನೇಕ ಭಾರತೀಯರನ್ನು ರಷ್ಯಾಗೆ ಕಳುಹಿಸಲಾಗಿದೆ. ಈಗಾಗಲೇ ಸುಮಾರು 12 ಭಾರತೀಯರು ರಷ್ಯಾದ ಯುದ್ಧದಲ್ಲಿ ಹೋರಾಡಬೇಕಾದ ಅನಿವಾರ್ಯತೆಗೆ ದೂಡಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ.
ತನಿಖಾ ಸಂಸ್ಥೆಯು ಪ್ರಕರಣವನ್ನು ದಾಖಲಿಸಿಕೊಂಡಿದೆ ಮತ್ತು ಕಳ್ಳಸಾಗಣೆಯಲ್ಲಿ ತೊಡಗಿರುವ ಏಜೆಂಟ್ಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಏಳು ನಗರಗಳ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾರಂಭಿಸಿದೆ. ದೆಹಲಿ, ಮುಂಬೈ, ಚೆನ್ನೈ, ತಿರುವನಂತಪುರಂ, ಅಂಬಾಲಾ, ಚಂಡೀಗಢ ಮತ್ತು ಮಧುರೈನಲ್ಲಿ ದಾಳಿ ನಡೆಸಲಾಗುತ್ತಿದ್ದು, ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ದಾಳಿಯ ಸಮಯದಲ್ಲಿ, ಈ ಸಂಸ್ಥೆಗಳು ರಷ್ಯಾ ಮತ್ತು ಉಕ್ರೇನ್ಗೆ ಕಳುಹಿಸಿರುವ ಭಾರತೀಯರ ಸಂಖ್ಯೆ 35 ಎಂದು ತಿಳಿದುಬಂದಿದೆ. “ಅವರೆಲ್ಲರನ್ನೂ ಯುದ್ಧದಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಬಿಐನ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ ಬಾಬಾ ವ್ಲಾಗ್ಸ್ ನಡೆಸುತ್ತಿರುವ ದುಬೈ ಮೂಲದ ಫೈಸಲ್ ಖಾನ್ ಅಲಿಯಾಸ್ ಬಾಬಾ ಹೆಸರೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.