ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಇತ್ತೀಚಿನ ಇಪ್ಸೋಸ್ ಇಂಡಿಯಾಬಸ್ ಸಂಸ್ಥೆ ನಡೆಸಿದ ಸಮೀಕ್ಷೆ.
ಸಮೀಕ್ಷೆಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನುಮೋದನೆ ರೇಟಿಂಗ್ ಶೇ. 75ಕ್ಕೆ ಏರಿದೆ. ಕಳೆದ ವರ್ಷದ ಸೆಪ್ಟಂಬರ್ ನಲ್ಲಿ 65% ರಷ್ಟಿದ್ದ ರೇಟಿಂಗ್ ಆರು ತಿಂಗಳಲ್ಲಿ ಪ್ರತಿಶತ ಹತ್ತು ಏರಿಕೆಯಾಗಿದೆ.
ಡಿಸೆಂಬರ್ 2022ರಿಂದ ಪ್ರಧಾನಿಯವರ ರೇಟಿಂಗ್ ಹೆಚ್ಚಾಗುತ್ತಲೇ ಇದೆ. ಡಿಸೆಂಬರ್ 2022ರಲ್ಲಿ ಶೇ. 60, ಫೆಬ್ರವರಿ 2023ರಲ್ಲಿ ಶೇ. 67, ಸೆಪ್ಟಂಬರ್ 2023ರಲ್ಲಿ ಶೇ. 65 ಮತ್ತು ಫೆಬ್ರವರಿ 2024ರಲ್ಲಿ ಅನುಮೋದನೆ ಶೇ. 75ರಷ್ಟಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ.
” ಫೆಬ್ರವರಿ ತಿಂಗಳಲ್ಲಿ ನಡೆಸಲಾದ ಸಮೀಕ್ಷೆಯಿದು. ಈ ಸಮಯದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ, ಅಬುದಾಬಿಯಲ್ಲಿ ದೇವಾಲಯ ಆರಂಭ ಮುಂತಾದ ವಿದ್ಯಮಾನಗಳು ನಡೆದಿವೆ. ಭಾರತದಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ವಿಶ್ವದ ದೊಡ್ಡ ದೇಶಗಳು ಮುಂದೆ ಬಂದಿರುವುದು, ಇಂತಹ ಬೆಳವಣಿಗೆಗಳು ಮೋದಿಯವರ ಜನಪ್ರಿಯತೆ ಹೆಚ್ಚಿಸುವಲ್ಲಿ ಪರಿಣಾಮವನ್ನು ಬೀರಿರಬಹುದು ” ಎಂದು ಇಪ್ಸೋಸ್ ಇಂಡಿಯಾಬಸ್ ಸಂಸ್ಥೆ ಪರಿಜಾತ್ ಚಕ್ರಬರ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.