ನವದೆಹಲಿ: ಅಮುಲ್ನ ಯಶಸ್ಸು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಮುಲ್ ಎಂದೇ ಜನಪ್ರಿಯವಾಗಿರುವ ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಜಿಸಿಎಂಎಂಎಫ್ನ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಇಂದು ಅವರು ಮಾತನಡಿದರು.
ರೈತರು ಮತ್ತು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಅಮುಲ್ ಕೊಡುಗೆಯನ್ನು ಶ್ಲಾಘಿಸಿದ ಪ್ರಧಾನಿ, ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮಹಿಳೆಯರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದರು.
ಭಾರತದ ಡೈರಿ ಕ್ಷೇತ್ರವು 6 ಪ್ರತಿಶತದಷ್ಟು ಬೆಳವಣಿಗೆ ಹೊಂದುತ್ತಿದೆ, ವಾರ್ಷಿಕ 10 ಲಕ್ಷ ಕೋಟಿ ವಹಿವಾಟು ಹೊಂದಿರುವ ವಿಶ್ವದ ಸರಾಸರಿಗಿಂತ ಹೆಚ್ಚಿದೆ ಮತ್ತು ಭಾರತದ ಡೈರಿ ಕ್ಷೇತ್ರದ ನಿಜವಾದ ಶಕ್ತಿ ಮಹಿಳೆಯರ ಶಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ಜಾನುವಾರುಗಳ ಆರೋಗ್ಯವನ್ನು ಸುಧಾರಿಸಲು ಮತ್ತು ಜಾನುವಾರು ಸಾಕುವ ರೈತರನ್ನು ಸಬಲೀಕರಣಗೊಳಿಸಲು ಸರ್ಕಾರವು ತೆಗೆದುಕೊಳ್ಳುತ್ತಿರುವ ಉಪಕ್ರಮಗಳ ಸರಣಿಯ ಮೇಲೆ ಪ್ರಧಾನಮಂತ್ರಿ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಹೊಸ UHT ಹಾಲಿನ ಸ್ಥಾವರ ಮತ್ತು ಅಮುಲ್ ಡೈರಿಯಲ್ಲಿ ಚೀಸ್ ಪ್ಲಾಂಟ್ನ ವಿಸ್ತರಣೆ, ಸಬರ್ ಡೈರಿಯಲ್ಲಿ ಚೀಸ್ ಪ್ಲಾಂಟ್, ಸರ್ಹಾದ್ ಡೈರಿಯಲ್ಲಿ ಐಸ್ಕ್ರೀಮ್ ಪ್ಲಾಂಟ್, ಮುಂಬೈನಲ್ಲಿ ಭರೂಚ್ ಯೂನಿಯನ್ನಿಂದ ಡೈರಿ ಪ್ಲಾಂಟ್ ಮತ್ತು ರಾಜ್ಕೋಟ್ ಡೈರಿಯಿಂದ ಡೈರಿ ಪ್ಲಾಂಟ್ ವಿಸ್ತರಣೆಯನ್ನು ಉದ್ಘಾಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.