ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಸೇನಾ ಪಡೆಗಳು ಪಾಕಿಸ್ತಾನದ ಡ್ರೋನ್ಗೆ ಗುಂಡು ಹಾರಿಸಿದವು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ ಡ್ರೋನ್, ಭಾನುವಾರ ತಡರಾತ್ರಿ ಭಾರತದ ಭೂಪ್ರದೇಶದ ಮೇಲೆ ಸುಳಿದಾಡಿ ನಂತರ ಪಾಕಿಸ್ತಾನದ ಕಡೆಗೆ ಮರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಂಧರ್ನ ನಾರ್ ಮಾನ್ಕೋಟೆ ಪ್ರದೇಶದಲ್ಲಿ ಶತ್ರುಗಳ ಡ್ರೋನ್ನ ಚಲನೆಯನ್ನು ಪತ್ತೆ ಮಾಡಲಾಗಿದೆ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿದ್ದ ಪಡೆಗಳು ಅದನ್ನು ಉರುಳಿಸಲು ಕನಿಷ್ಠ ಮೂರು ಸುತ್ತು ಗುಂಡು ಹಾರಿಸಿದವು. ಆದರೆ ಗುಂಡು ತಗುಲದ ಕಾರಣ ಅದು ಸುಳಿದಾಡಿ ಪಾಕಿಸ್ಥಾನಕ್ಕೆ ಮರಳಿದೆ.
ಭಾರತೀಯ ಸೈನಿಕರ ಗುಂಡಿನ ದಾಳಿಯ ಬಳಿಕ ಡ್ರೋನ್ ಪಾಕಿಸ್ತಾನದ ಕಡೆಗೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಮಾದಕ ದ್ರವ್ಯಗಳು, ಶಸ್ತ್ರಾಸ್ತ್ರಗಳು ಅಥವಾ ಸ್ಫೋಟಕ ವಸ್ತುಗಳನ್ನು ಬೀಳಿಸಲು ಗಡಿಯಾಚೆಯಿಂದ ಹಾರಿಸಲಾಗುವ ಡ್ರೋನ್ಗಳ ಕುರಿತು ತಿಳಿಸುವವರಿಗೆ ರೂ. 3 ಲಕ್ಷ ನಗದು ಬಹುಮಾನವನ್ನು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.