ಲಂಡನ್: ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಸಂದರ್ಭ ಶಿಸ್ತುಕ್ರಮ ಕೈಗೊಳ್ಳಲು ಸಂಬಂಧ ಸಿಖ್ಖರು ಪೇಟಾ ಧರಿಸುವ ಕುರಿತಾದ ನಿಷೇಧವನ್ನು ಯುಕೆ ಸರ್ಕಾರ ಹಿಂಪಡೆದಿದೆ. ಹೊಸ ನಿಯಮ ಜಾರಿಗೊಳಿಸುವ ಮೂಲಕ ಪೇಟ ಧರಿಸಲು ಅನುವು ಮಾಡಿಕೊಟ್ಟಿದೆ.
ಸುರಕ್ಷತೆ, ಮತ್ತು ರೀತಿ ರಿವಾಜಿನಂತೆ ಧರಿಸುವ ಪೇಟವನ್ನು ನಿರ್ಮಾಣ ಕಾರ್ಯಗಳಂತಹ ಅಪಾಯದ ಪ್ರದೇಶಗಳಲ್ಲಿ ಧರಿಸಬಾರದೆಂದು ನಿರ್ಬಂಧ ಹೇರಿತ್ತು. ಇದರ ಲೋಪದೋಷಗಳನ್ನು ತಿದ್ದುಪಡಿ ಮಾಡುವಂತೆ ಸಿಖ್ ಗುಂಪುಗಳು ಪ್ರತಿಭಟನೆ ನಡೆಸಿದ್ದವು. ಯು.ಕೆ. ಸರ್ಕಾರ ಈ ಲೋಪದೋಷವನ್ನು ತಡೆಯಲು ನಿಯಂತ್ರಣ ಮಂಡಳಿಯಲ್ಲಿ ತಿದ್ದುಪಡಿ ಜಾರಿಗೆ ತಂದಿತ್ತು. ಅದರಂತೆ ಈ ನಿಯಮವನ್ನು ಬದಲಿಸಲಾಗಿದೆ.
ಈ ಹೊಸ ನಿಯಮದಂತೆ ಯಾವುದೇ ಹಿನ್ನೆಲೆಯ ವ್ಯಕ್ತಿಯು ತನ್ನ ಕೆಲಸವನ್ನು ಆರಿಸಿ, ಜೀವನಕ್ಕಾಗಿ ಶ್ರಮವಹಿಸುತ್ತಿದ್ದಲ್ಲಿ ಸರ್ಕಾರ ಅವರೊಂದಿಗೆ ಸಹಕರಿಸಲಿದೆ ಎಂದು ಯು.ಕೆ.ಯ ಉದ್ಯೋಗ ಸಚಿವೆ ಪ್ರೀತಿ ಪಟೇಲ್ ತಿಳಿಸಿದ್ದಾರೆ.
1989ರಿಂದೀಚೆಗೆ ನಿರ್ಮಾಣ ಉದ್ಯಮಗಳಂತಹ ಅತಿ ಅಪಾಯಕಾರಿ ಪ್ರದೇಶಗಳನ್ನು ಹೊರತುಪಡಿಸಿ ಇನ್ನಿತರ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವವರಿಗೆ ನಿಷೇಧ ಹೇರಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.