ನವದೆಹಲಿ: ನೆರೆಯ ಪಾಕಿಸ್ಥಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ನಾಲ್ಕು ಪ್ರಾಂತೀಯ ಅಸೆಂಬ್ಲಿಗಳೊಂದಿಗೆ ಸಂಸತ್ತಿನ ಕೆಳಮನೆಯಾದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 336 ಸ್ಥಾನಗಳಿಗೆ 44 ರಾಜಕೀಯ ಪಕ್ಷಗಳು ಸ್ಪರ್ಧಿಸಲಿವೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ (ಪಿಎಂಎಲ್-ಎನ್) ನಾಯಕ ನವಾಜ್ ಷರೀಫ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ ಅವರು ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ದೇಶಭ್ರಷ್ಟತೆಯಿಂದ ಮರಳಿರುವ ನವಾಜ್ ಷರೀಫ್ ಅವರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭಾರತಕ್ಕೆ ‘ಶಾಂತಿಯ ಸಂದೇಶ’ದ ಭರವಸೆ ನೀಡಿದ್ದಾರೆ. ಕಳೆದ ವರ್ಷ, ಷರೀಫ್ ಅವರು ಭಾರತದ ಪ್ರಗತಿ ಮತ್ತು ಜಾಗತಿಕ ಪ್ರಗತಿಯನ್ನು ಒಪ್ಪಿಕೊಂಡು ಕೊಂಡಾಡಿದ್ದರು. ಇನ್ನೊಂದೆಡೆ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ವಿರುದ್ಧ 150 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ವಾರದಲ್ಲಿ ಮೂರು ಬಾರಿ ಅವರಿಗೆ ಶಿಕ್ಷೆ ಘೋಷಿಸಲಾಗಿದೆ. ಅವರನ್ನು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ ಮತ್ತು ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಚಿಹ್ನೆ ‘ಬ್ಯಾಟ್’ ಅನ್ನು ಚುನಾವಣೆಯಲ್ಲಿ ಬಳಸುವುದಕ್ಕೆ ಅನುಮತಿ ನಿರಾಕರಿಸಲಾಗಿದೆ.
ಈ ನಡುವೆ, ಸಾರ್ವತ್ರಿಕ ಚುನಾವಣೆಯ ಮುನ್ನಾದಿನದಂದು ಬಲೂಚಿಸ್ತಾನದಲ್ಲಿ ಅಭ್ಯರ್ಥಿಗಳ ಕಚೇರಿಗಳ ಬಳಿ ಎರಡು ಬಾಂಬ್ ಸ್ಫೋಟಗಳು ನಡೆದಿದ್ದು, ಕನಿಷ್ಠ 28 ಜನರು ಸತ್ತಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಕ್ವೆಟ್ಟಾ ನಗರದ ಉತ್ತರದಲ್ಲಿರುವ ಪಿಶಿನ್ ಜಿಲ್ಲೆಯಲ್ಲಿ ನಡೆದ ಮೊದಲ ಸ್ಫೋಟದಲ್ಲಿ 16 ಜನರು ಸಾವನ್ನಪ್ಪಿದರು. ಎರಡನೇ ಸ್ಫೋಟದಲ್ಲಿ ಪೂರ್ವದ ಕಿಲಾ ಸೈಫುಲ್ಲಾದಲ್ಲಿ 12 ಜನರು ಸಾವನ್ನಪ್ಪಿದರು. ಎರಡೂ ದಾಳಿಗಳಿಗೆ ತಾವೇ ಹೊಣೆ ಎಂದು ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪು ಹೇಳಿದೆ. ಮೋಟರ್ಬೈಕ್ಗಳನ್ನು ಬಳಸಿ ಬಾಂಬ್ ಸ್ಫೋಟಗಳನ್ನು ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.