ನವದೆಹಲಿ: ದೇಶದ ವಿವಿಧ ಅಲ್ಪಸಂಖ್ಯಾತ ವರ್ಗಗಳನ್ನು ಪ್ರತಿನಿಧಿಸುವ ಧಾರ್ಮಿಕ ಮುಖಂಡರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಇಂದು ಭೇಟಿ ಮಾಡಿದರು. ನಂತರ ಅವರು ಸಂದರ್ಶಕರ ಗ್ಯಾಲರಿಯಿಂದ ಸಂಸತ್ತಿನ ಕಲಾಪಗಳನ್ನು ವೀಕ್ಷಿಸಿದರು.
ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ನ ಮುಖ್ಯ ಇಮಾಮ್ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮತ್ತು ಅಜ್ಮೀರ್ ಷರೀಫ್ ದರ್ಗಾದ ಗಡ್ಡಿನಾಶಿನ್ ಸೈಯದ್ ಸಲ್ಮಾನ್ ಚಿಸ್ತಿ ಅವರು ಮೋದಿ ಭೇಟಿಯಾದ ಧಾರ್ಮಿಕ ಮುಖಂಡರಲ್ಲಿ ಸೇರಿದ್ದಾರೆ
ಇಲ್ಯಾಸಿ ಅವರು ಪ್ರಧಾನಿಯನ್ನು ಭೇಟಿ ಮಾಡುವ ಮೊದಲು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನಮ್ಮ ಧ್ಯೇಯವು ಪ್ರೀತಿಯ ಸಂದೇಶ, ರಾಷ್ಟ್ರದ ಸಂದೇಶ” ಎಂದು ಹೇಳಿದರು.
ಭಾರತ ಒಂದೇ ಎಂಬುದನ್ನು ಜಗತ್ತಿಗೆ ತಿಳಿಸಲು ಬಯಸುತ್ತೇವೆ ಎಂದು ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನದ ಸಂಸ್ಥಾಪಕಿ ಹಿಮಾನಿ ಸೂದ್ ಹೇಳಿದ್ದಾರೆ.
"Paigaam-e-Mohabbat hai", say religious leaders as they reach Parliament to meet PM Modi
Read @ANI Story | https://t.co/Wo1OyzHFzT#Parliament #PMModi #Religiousleaders pic.twitter.com/wWaVWUJmwJ
— ANI Digital (@ani_digital) February 5, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.