ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ನ ಟೋಪಿ ಪಿರ್ ಗ್ರಾಮವನ್ನು ದತ್ತು ತೆಗೆದುಕೊಂಡು ಅದನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಭಾರತೀಯ ಸೇನೆಯು ನಿರ್ಧರಿಸಿದೆ. ಪಿರ್ಪಾಂಜಲ್ ಪರ್ವತಗಳ ದಟ್ಟವಾದ ಕಾಡಿನಲ್ಲಿ ನೆಲೆಸಿರುವ ಗ್ರಾಮದ ಮೂವರು ನಾಗರಿಕರು ಸೇನೆಯ ಕಸ್ಟಡಿಯಲ್ಲಿ ಮರಣ ಹೊಂದಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಸೇನೆಯು ತನ್ನ ಸದ್ಭಾವನಾ ಕಾರ್ಯಕ್ರಮದಡಿಯಲ್ಲಿ ಉಪಕ್ರಮವನ್ನು ಕೈಗೊಂಡಿದೆ. ನಾಗರಿಕರ ಸಾವಿನ ಬಗ್ಗೆ ಗ್ರಾಮಸ್ಥರು ಸೇನೆಯ ಮೇಲೆ ಅಸಮಾಧಾನ ಹೊಂದಿದ ಸಂದರ್ಭದಲ್ಲಿ ಸ್ಥಳೀಯರ ಹೃದಯವನ್ನು ಗೆಲ್ಲುವ ಗುರಿಯನ್ನು ಸೇನೆ ಹೊಂದಿದೆ.
ಪಿರ್ ಪಂಜಾಲ್ ಪ್ರದೇಶ ಮತ್ತು ನಿಯಂತ್ರಣ ರೇಖೆ ಸೇರಿದಂತೆ ಜಮ್ಮು ಪ್ರಾಂತ್ಯದ ಪ್ರದೇಶಗಳ ಕಾರ್ಯಾಚರಣೆಯ ನಿಯಂತ್ರಣವನ್ನು ನೋಡಿಕೊಳ್ಳುವ ಸೇನೆಯ 16 ಕಾರ್ಪ್ಸ್ ಗ್ರಾಮವನ್ನು ದತ್ತು ತೆಗೆದುಕೊಂಡಿದೆ.
ಡಿಸೆಂಬರ್ 22 ರಂದು, ಸುಂದರವಾದ ಟೋಪಿ ಪಿರ್ ಗ್ರಾಮವದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆದಿತ್ತು. ಉಗ್ರರಿಗೆ ಸಹಾಯ ಮಾಡಿದ್ದಾರೆ ಎಂಬ ಅನುಮಾನದ ಮೇರೆಗೆ ಸೇನೆ ಕಸ್ಟಡಿಗೆ ತೆಗೆದುಕೊಂಡಿದ್ದ ಗ್ರಾಮದ ಮೂವರು ಕಸ್ಟಡಿಯಲ್ಲಿ ಮೃತಪಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.