ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಂತರರಾಷ್ಟ್ರೀಯ ಗಡಿಯಲ್ಲಿ ಗುರುವಾರ ರೂ1.39 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಿಸುವ ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದೆ. ಬಿಎಸ್ಎಫ್ನ ಗುಪ್ತಚರ ಘಟಕವು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬೆಟಾಯ್ ಔಟ್ಪೋಸ್ಟ್ ಬಳಿ ಗಸ್ತು ತಿರುಗುತ್ತಿದ್ದ ಯೋಧರನ್ನು ಸಂಭವನೀಯ ಕಳ್ಳಸಾಗಾಣಿಕೆ ಬಗ್ಗೆ ಎಚ್ಚರಿಸಿದ ಬಳಿಕ ಕಾರ್ಯಾಚರಣೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಬಿಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಬಿಎಸ್ಎಫ್ ಸಿಬ್ಬಂದಿಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ವಿಫಲಗೊಳಿಸಿದರು ಮತ್ತು ಸ್ಮಗ್ಲರ್ಗಳು ಭಾರತದಿಂದ ಬಾಂಗ್ಲಾದೇಶಕ್ಕೆ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು. ಅವರಿಂದ 1,66,900 ಯುಎಸ್ ಡಾಲರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ವಶಪಡಿಸಿಕೊಂಡ ಅಮೆರಿಕನ್ ಡಾಲರ್ ಮೌಲ್ಯ 1,39,01,101 ರೂಪಾಯಿ ಎಂದು ತಿಳಿಸಿದ್ದಾರೆ.
ಜನವರಿ 3 ರಂದು ರಾತ್ರಿ 10 ಗಂಟೆಗೆ ಬಿಎಸ್ಎಫ್ ಗಡಿ ಹೊರಠಾಣೆ ಬೇಟೈ ಬಳಿ ಈ ಘಟನೆ ನಡೆದಿದೆ. ಬಿಎಸ್ಎಫ್ ಗುಪ್ತಚರ ವಿಭಾಗವು ತಮ್ಮ ಪ್ರದೇಶಕ್ಕೆ ವಿದೇಶಿ ಹಣವನ್ನು ತರುತ್ತಿರುವ ಕಳ್ಳಸಾಗಣೆದಾರರ ಬಗ್ಗೆ ಕರ್ತವ್ಯ ನಿರತ ಯೋಧರಿಗೆ ಎಚ್ಚರಿಕೆ ನೀಡಿತು. ಜಾಗೃತರಾದ ಯೋಧರಿ, ಗುಪ್ತಚರರೊಂದಿಗೆ, ಕಳ್ಳಸಾಗಣೆ ನಡೆಯಬೇಕಿದ್ದ ಸ್ಥಳದಲ್ಲಿ ಹೊಂಚುದಾಳಿ ಸ್ಥಾಪಿಸಿದ್ದರು. ನಂತರ ಕಾರ್ಯಾಚರಣೆ ನಡೆಸಿ ಕಳ್ಳಸಾಗಾಣೆಯನ್ನು ವಿಫಲಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.