ನವದೆಹಲಿ: ಉತ್ತರ ಅಮೆರಿಕಾದಲ್ಲಿನ ಕೇರಳ ಹಿಂದೂಗಳು ಭಾರತ-ಅಮೆರಿಕನ್ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರ ಪೋಷಕರಿಗೆ ಪವಿತ್ರವಾದ ‘ಋಗ್ವೇದ’ವನ್ನು ಉಡುಗೊರೆಯಾಗಿ ನೀಡಿದರು, ಓಹಿಯೋದ ಡೇಟನ್ ಟೆಂಪಲ್ನಲ್ಲಿ ಋಗ್ವೇದವನ್ನು ನೀಡಲಾಗಿದೆ.
ವಿವೇಕ್ ಅವರ ತಂದೆ ಋಗ್ವೇದವನ್ನು ತಮ್ಮ ಮಗನಿಗೆ ಹಸ್ತಾಂತರಿಸುವ ಮೊದಲು ದೇಗುಲದಲ್ಲಿ ಅದಕ್ಕೆ ಪೂಜೆ ನೆರವೇರಿಸಿದ್ದಾರೆ. ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ರಾಮಸ್ವಾಮಿ ಅವರು ಋಗ್ವೇದದೊಳಗೆ ಅಡಕವಾಗಿರುವ ಆಳವಾದ ಜ್ಞಾನಯುಕ್ತ ಸ್ತೋತ್ರಗಳನ್ನು ಪಠಿಸುತ್ತಿದ್ದಂತೆ ಅಲ್ಲಿನ ಇಡೀ ವಾತಾವರಣವು ಆಧ್ಯಾತ್ಮಿಕತೆಯಿಂದ ಪ್ರತಿಧ್ವನಿಸಿತು.
ಡೇಟನ್ ಟೆಂಪಲ್ನಲ್ಲಿ ನಡೆದ ಮಹತ್ವದ ಸಮಾರಂಭದಲ್ಲಿ, ಉತ್ತರ ಅಮೆರಿಕದ ಕೇರಳ ಹಿಂದೂಗಳು ವಿವೇಕ್ ರಾಮಸ್ವಾಮಿ ಅವರ ಪೋಷಕರಿಗೆ ಪವಿತ್ರವಾದ ‘ಋಗ್ವೇದಮ್’ ಅನ್ನು ಉಡುಗೊರೆಯಾಗಿ ನೀಡಿದರು, ಆಳವಾದ ಗೌರವವನ್ನು ಪಡೆದರು ಎಂದು ಒಕ್ಕಣೆ ಬರೆದು ವಿಡಿಯೋ ಹಂಚಿಕೊಳ್ಳಲಾಗಿದೆ.
Parent's of Vivek Ramaswamy were presented "Rig Vedam" at Dayton Temple by hindus living in North America.
Vivek's father conducted a pooja for the book & passed it to Vivek, who received it with immense reverence & recited the Aikyamatya Sukthampic.twitter.com/B0YSdV3Enq
— Megh Updates 🚨™ (@MeghUpdates) January 2, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.