ನವದೆಹಲಿ: ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು ಈ ವರ್ಷ ಒಂದು ಶತಕೋಟಿ ಟನ್ಗಳನ್ನು ಮೀರುವ ಸಾಧ್ಯತೆಯಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ.
ಕಲ್ಲಿದ್ದಲು ಸಚಿವಾಲಯದ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2030 ರ ವೇಳೆಗೆ ಭಾರತದ ತಲಾ ವಿದ್ಯುತ್ ಬಳಕೆ ದ್ವಿಗುಣಗೊಳ್ಳಲಿದ್ದು, ಕಲ್ಲಿದ್ದಲು ಉತ್ಪಾದನೆ ಮತ್ತು ಹೊರತೆಗೆಯುವಿಕೆಯ ಮೇಲೆ ಕೇಂದ್ರೀಕರಿಸುವ ಮೂಲಕ ರಾಷ್ಟ್ರದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ಸಚಿವಾಲಯವು ಅಳವಡಿಸಿಕೊಂಡಿರುವ ಹತ್ತು ಹಲವು ಕ್ರಮಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಕಲ್ಲಿದ್ದಲಿನ ದೇಶೀಯ ಉತ್ಪಾದನೆ ಮತ್ತು ಲಭ್ಯತೆಯಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ ಎಂದರು. ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯು ಈ ವರ್ಷ ಒಂದು ಶತಕೋಟಿ ಟನ್ಗಳನ್ನು ಮೀರುವ ಸಾಧ್ಯತೆಯಿದೆ. ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಅಡಿಯಲ್ಲಿ ಇದುವರೆಗೆ 91 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
2021-2022 ರಲ್ಲಿ ಭಾರತd ಕಲ್ಲಿದ್ದಲು ಉತ್ಪಾದನೆಯು 778.19 ಮಿಲಿಯನ್ ಟನ್ (MT) ಆಗಿತ್ತು, 2020-2021 ರಲ್ಲಿ 716.08 MT ಗೆ ಹೋಲಿಸಿದರೆ ಸುಮಾರು 8.67% ಬೆಳವಣಿಗೆಯನ್ನು ಇದು ಕಂಡಿದೆ. ದೇಶದಲ್ಲಿ ಕಲ್ಲಿದ್ದಲಿನ ಹೆಚ್ಚಿನ ಅಗತ್ಯವನ್ನು ಸ್ಥಳೀಯ ಉತ್ಪಾದನೆ/ಸರಬರಾಜಿನ ಮೂಲಕ ಪೂರೈಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.