ನವದೆಹಲಿ: ಬುಧವಾರ ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪ ಉಂಟಾದ ಒಂದು ದಿನದ ನಂತರ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಇಂದು 14 ಪ್ರತಿಪಕ್ಷ ಸಂಸದರನ್ನು ಲೋಕಸಭೆಯಿಂದ ಮತ್ತು ಒಬ್ಬರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡಿರುವ 14 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್, ಇಬ್ಬರು ಸಿಪಿಎಂ, ಒಬ್ಬರು ಸಿಪಿಐ ಮತ್ತು ಇಬ್ಬರು ಡಿಎಂಕೆ ಪಕ್ಷದವರಾಗಿದ್ದಾರೆ.
ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಎಂಡಿ ಜಾವೇದ್, ವಿಕೆ ಶ್ರೀಕಂದನ್, ಬೆನ್ನಿ ಬೆಹನನ್, ಡಿಎಂಕೆ ಸಂಸದರಾದ ಕೆ ಕನಿಮೋಳಿ ಮತ್ತು ಎಸ್ಆರ್ ಪಾರ್ಥಿಬನ್, ಸಿಪಿಎಂ ಸಂಸದರಾದ ಪಿಆರ್ ನಟರಾಜನ್ ಮತ್ತು ಎಸ್ ವೆಂಕಟೇಶನ್ ಮತ್ತು ಸಿಪಿಐ ಸಂಸದ ಕೆ ಸುಬ್ಬರಾಯನ್ ಅಮಾನತುಗೊಂಡವರಲ್ಲಿ ಸೇರಿದ್ದಾರೆ.
ಈ ನಡುವೆ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಈ ಅಧಿವೇಶನದ ಉಳಿದ ಅವಧಿಗೆ ಅಶಿಸ್ತಿನ ವರ್ತನೆಗಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಆದರೆ, ಅವರು ಅಮಾನತುಗೊಂಡಿದ್ದರೂ ಸದನದಿಂದ ಹೊರಬರಲು ನಿರಾಕರಿಸಿದ್ದಾರೆ. ಬಿಜೆಪಿಯ ಪಿಯೂಷ್ ಗೋಯಲ್ ಅವರು ಈ ವಿಷಯವನ್ನು ಸದನದ ವಿಶೇಷಾಧಿಕಾರ ಸಮಿತಿಗೆ ಕಳುಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.