ನವದೆಹಲಿ: ಮ್ಯಾನ್ಮಾರ್ ವಿಶ್ವದ ಅತಿದೊಡ್ಡ ಅಫೀಮು ಉತ್ಪಾದಕ ಎಂಬುದಾಗಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.
ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ (UNODC) ತನ್ನ ಆಗ್ನೇಯ ಏಷ್ಯಾದ ಅಫೀಮು ಸಮೀಕ್ಷೆ 2023 ಅನ್ನು ಇಂದು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ಮ್ಯಾನ್ಮಾರ್ ವಿಶ್ವದ ಅತಿದೊಡ್ಡ ಅಫೀಮು ಉತ್ಪಾದಕ ಎಂದು ವರದಿ ಹೇಳುತ್ತದೆ.
2022 ರಿಂದ 2023 ರವರೆಗೆ, ಮ್ಯಾನ್ಮಾರ್ ಅಕ್ರಮ ಬೆಳೆ ಬೆಳೆಯಲು ಬಳಸಿದ ಭೂಮಿಯ ಪ್ರಮಾಣದಲ್ಲಿ 18 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ. 1 ಲಕ್ಷ 16 ಸಾವಿರ ಎಕರೆಗಳಲ್ಲಿ ಅಲ್ಲಿ ಅಫೀಮು ಬೆಳೆಯಲಾಗುತ್ತಿದೆ ಮತ್ತು ಉತ್ಪಾದನೆಯಲ್ಲಿ 16 ಪ್ರತಿಶತದಷ್ಟು ಏರಿಕೆಯನ್ನ ಕಂಡಿದೆ. ಸುಧಾರಿತ ಸಾಂದ್ರತೆ, ನೀರಾವರಿ ಮತ್ತು ರಸಗೊಬ್ಬರಗಳ ಬಳಕೆಯಂತಹ ಅನೇಕ ಅಂಶಗಳು ಅಫೀಮು ಬೆಳವಣಿಗೆಗೆ ಕಾರಣವೆಂದು ಹೇಳಬಹುದು.
ಈ ಹಿಂದೆ ಅಫ್ಘಾನಿಸ್ತಾನವು ಈ ಕುಖ್ಯಾತಯನ್ನು ಹೊಂದಿತ್ತು ಆದರೆ 2021 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಅಫೀಮು ಗಸಗಸೆ ಕೃಷಿಯು ಶೇಕಡಾ 95 ರಷ್ಟು ಕಡಿಮೆಯಾಗಿದೆ. ಆಗ್ನೇಯ ಏಷ್ಯಾದಲ್ಲಿ ಅಫೀಮು ಬೇಸಾಯವು ಬಡತನ, ಸರ್ಕಾರಿ ಸೇವೆಗಳ ಕೊರತೆ, ಸ್ಥೂಲ ಆರ್ಥಿಕ ಪರಿಸರ, ಅಸ್ಥಿರತೆ ಮತ್ತು ಅಭದ್ರತೆಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.