ನವದೆಹಲಿ: ದೇಶಾದ್ಯಂತ 10,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಈ ಹಣಕಾಸು ವರ್ಷದಲ್ಲಿ ನಾಗರಿಕರ ಸುಮಾರು 7,416 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದೆ ಎಂದು ಕೇಂದ್ರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಮೇಲ್ಮನೆಯಲ್ಲಿ ಲಿಖಿತ ಉತ್ತರದಲ್ಲಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ಈ ಮಾಹಿತಿ ನೀಡಿದ್ದು, ಕಳೆದ 9 ವರ್ಷಗಳಲ್ಲಿ ವಾರ್ಷಿಕ ಮಾರಾಟದಲ್ಲಿ ಅಭೂತಪೂರ್ವ 150 ಪಟ್ಟು ಬೆಳವಣಿಗೆಯನ್ನು ಈ ಉಪಕ್ರಮ ಕಂಡಿದೆ ಎಂದು ಅವರು ಹೇಳಿದ್ದಾರೆ.
”2022-23ರ ಹಣಕಾಸು ವರ್ಷದಲ್ಲಿ, ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (ಪಿಎಂಬಿಐ) ರೂ 1,236 ಕೋಟಿ ಮೌಲ್ಯದ ಜನೌಷಧಿ ಔಷಧಿಗಳನ್ನು ಮಾರಾಟ ಮಾಡಿದೆ, ಹಿಂದಿನ ವರ್ಷಕ್ಕಿಂತ ಸರಿಸುಮಾರು 40 ಪ್ರತಿಶತದಷ್ಟು ಬೆಳವಣಿಗೆಯನ್ನು ಇದು ಈ ವರ್ಷ ಕಂಡಿದೆ ಮತ್ತು ಇದು ನಾಗರಿಕರ ಸರಿಸುಮಾರು ರೂ 7,416 ಉಳಿತಾಯಕ್ಕೆ ಕಾರಣವಾಗಿದೆ” ಎಂದು ತಿಳಿಸಿದರು.
2023-24ರ ಯೋಜಿತ ಮಾರಾಟದ ಗುರಿಯು 1,400 ಕೋಟಿ ರೂ.ಗಳಾಗಿದ್ದು, ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸುವ ಮೂಲಕ ಯೋಜನೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಖೂಬಾ ಹೇಳಿದರು. ಒಟ್ಟಾರೆಯಾಗಿ, ಕಳೆದ ಒಂಬತ್ತು ವರ್ಷಗಳಲ್ಲಿ, ಈ ಯೋಜನೆಯಡಿಯಲ್ಲಿ ನಾಗರಿಕರಿಗೆ ಒಟ್ಟು 23,000 ಕೋಟಿ ರೂ.ಗಿಂತ ಹೆಚ್ಚಿನ ಉಳಿತಾಯವನ್ನು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿದಿನ ಸರಾಸರಿ 10-12 ಲಕ್ಷ ಜನರು ಜನೌಷಧಿ ಕೇಂದ್ರಗಳಿಗೆ (ಜೆಎಕೆ) ಭೇಟಿ ನೀಡುತ್ತಾರೆ. ಈ ವರ್ಷದ ನವೆಂಬರ್ 30 ರವರೆಗೆ ದೇಶದಾದ್ಯಂತ 753 ಜಿಲ್ಲೆಗಳಲ್ಲಿ 10,006 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (ಪಿಎಂಬಿಜೆಕೆ) ತೆರೆಯಲಾಗಿದೆ ಎಂದು ಖೂಬಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.