ಅಹ್ಮದಾಬಾದ್: ಗುಜರಾತಿನ ಅಹಮದಾಬಾದ್ನ ಸಬರಮತಿ ಮಲ್ಟಿಮೋಡಲ್ ಟ್ರಾನ್ಸ್ಪೋರ್ಟ್ ಹಬ್ನಲ್ಲಿ ನಿರ್ಮಿಸಲಾದ ಭಾರತದ ಮೊದಲ ಬುಲೆಟ್ ರೈಲು ಟರ್ಮಿನಲ್ನ ವೀಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಕೆಲಸವು ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಭಾರತದ ಮೊದಲ ಬುಲೆಟ್ ರೈಲು ಆಗಸ್ಟ್ 2026 ರಲ್ಲಿ ಓಡುವ ನಿರೀಕ್ಷೆಯಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿರುವ ವಿಡಿಯೋ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕ ವಾಸ್ತುಶಿಲ್ಪದ ವಿಹಂಗಮ ನೋಟವನ್ನು ತೋರಿಸುತ್ತದೆ.
“ಭಾರತದ ಮೊದಲ ಬುಲೆಟ್ ರೈಲಿಗೆ ಟರ್ಮಿನಲ್!’ ಅಹಮದಾಬಾದ್ನ ಸಬರಮತಿ ಮಲ್ಟಿಮೋಡಲ್ ಟ್ರಾನ್ಸ್ಪೋರ್ಟ್ ಹಬ್ ಅನ್ನು ಒಮ್ಮೆ ನೋಡಿ” ಎಂದು ಅಶ್ವನ್ ವೈಷ್ಣವ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಟರ್ಮಿನಲ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇದರ ಮೇಲೆ ವಿಮಾನ ನಿಲ್ದಾಣದಂತಹ ಶೈನಿಂಗ್ ಲಾಂಜ್ ಜೊತೆಗೆ ವಾಹನಗಳಿಗೆ ಮಾರ್ಗಗಳೂ ಇವೆ.
2017 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಈ ಯೋಜನೆಗೆ ಅಡಿಪಾಯ ಹಾಕಿದ್ದರು. ಬುಲೆಟ್ ರೈಲು ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿಲೋಮೀಟರ್ ದೂರವನ್ನು ಗಂಟೆಗೆ ಸರಾಸರಿ 320 ಕಿಮೀ ವೇಗದಲ್ಲಿ ಕ್ರಮಿಸಲಿದೆ. ಈ ರೈಲಿನ ಗರಿಷ್ಠ ವೇಗ ಗಂಟೆಗೆ 350 ಕಿ.ಮೀ. ಈ ಯೋಜನೆಯು ಸುರಂಗಗಳು ಮತ್ತು ಸಮುದ್ರ ಮಾರ್ಗಗಳನ್ನು ಸಹ ಒಳಗೊಂಡಿದೆ. ಈ ಯೋಜನೆಗೆ ಅಂದಾಜು 1 ಲಕ್ಷ 8 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ.
Terminal for India's first bullet train!
📍Sabarmati multimodal transport hub, Ahmedabad pic.twitter.com/HGeoBETz9x
— Ashwini Vaishnaw (@AshwiniVaishnaw) December 7, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.