ರಾಯ್ಪುರ: ಐದು ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ಛತ್ತೀಸ್ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ, ಭೂಪೇಶ್ ಬಘೇಲ್ ಸರ್ಕಾರದ ಎರಡನೇ ಅವಧಿ ಅಧಿಕಾರಕ್ಕೇರುವ ಕನಸನ್ನು ಕೊನೆಗೊಳಿಸಿದೆ. ಬಿಜೆಪಿ 54 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 35 ಸ್ಥಾನಗಳನ್ನು ಗೆದ್ದಿದೆ.
ಛತ್ತೀಸ್ಗಢ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಬಿಜೆಪಿ ಈಶ್ವರ್ ಸಾಹು ಅವರ ವಿಜಯ. ಮುಸ್ಲಿಂ ದುಷ್ಕರಿಗಳು ಸಾಹು ಅವರ ಮಗನನ್ನು ಹೊಡೆದು ಕೊಂದು ಹಾಕಿದ್ದರು. ಕಾಂಗ್ರೆಸ್ ಸರ್ಕಾರ ಕೊಲೆಗಾರರ ಪರವಾಗಿಯೇ ನಿಂತಿತ್ತು. ಇಂತಹ ಸಂದರ್ಭದಲ್ಲಿ ಸಾಹು ಅವರನ್ನು ಕಣಕ್ಕಿಳಿಸಿ ಬಿಜೆಪಿ ಕಾಂಗ್ರೆಸ್ಗೆ ಪಾಠ ಕಲಿಸಿದೆ.
ಬೆಮೆತಾರಾ ಜಿಲ್ಲೆಯ, ಸಜಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಈಶ್ವರ ಸಾಹು ಮತ್ತು ಕಾಂಗ್ರೆಸ್ನಿಂದ ರವೀಂದ್ರ ಚೌಬೆ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಚೌಬೆ ಏಳು ಬಾರಿ ಕಾಂಗ್ರೆಸ್ ಶಾಸಕರಾಗಿದ್ದರೂ ಕೂಡ ಸಾಹು ವಿರುದ್ಧ 5196 ಮತಗಳಿಂದ ಸೋತಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸಾಹು ಅವರ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, “ಇವರು ಈಶ್ವರ್ ಸಾಹು, ಕಾರ್ಮಿಕ, ಈಗ ಛತ್ತೀಸ್ಗಢದಲ್ಲಿ ಬಿಜೆಪಿ ಶಾಸಕರಾಗಿದ್ದಾರೆ. ಅವರ ಮಗ ಮುಸ್ಲಿಂ ಗುಂಪಿನಿಂದ ಕೊಲೆಯಾದ ನಂತರ ನಾವು ಅವರನ್ನು ಕಣಕ್ಕಿಳಿಸಿದೆವು ಮತ್ತು ಕಾಂಗ್ರೆಸ್ ಕೊಲೆಗಾರರ ಪರವಾಗಿ ನಿಲ್ಲುವ ಆಯ್ಕೆ ಮಾಡಿತ್ತು. ಇಂದು ಅವರು ರವೀಂದ್ರ ಚೌಬೆ ಅವರನ್ನು 7 ಬಾರಿ ಸೋಲಿಸಿದ್ದಾರೆ. ಅವರು ತಮ್ಮ ಮಗನನ್ನು ಮರಳಿ ಪಡೆಯುವುದಿಲ್ಲ ಆದರೂ ತುಸು ಸಮಾಧಾನ ಸಿಗಬಹುದು” ಎಂದಿದ್ದಾರೆ.
He is Eshwar Sahu, a labour, now a BJP MLA in Chattisgarh. We fielded him, after his son was killed by a Muslim mob, and the Congress chose to side with the murderers. Today, he defeated Ravindra Choubey, a 7 time Congress MLA!
He won’t get his son back but some closure perhaps… pic.twitter.com/NqpENwRBED— Amit Malviya (@amitmalviya) December 3, 2023
He is Sri Eshwar Sahu . @BJP4CGState candidate . He defeated 7 time @INCIndia MLA Sri Ravindra Choubey . His son was killed in a mob violence & as usual Cong was supportive of rioters . Today he avenged injustice in a Democratic battle . Congratulations . pic.twitter.com/JnRb9Jf3gz
— B L Santhosh (@blsanthosh) December 3, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.