ನವದೆಹಲಿ: ಸಿಂಗಾಪುರದ ಉಪಪ್ರಧಾನಿ ಲಾರೆನ್ಸ್ ವಾಂಗ್ ಅವರ ವೀಣೆ ನುಡಿಸಲು ಕಲಿಯುವ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಾರೈಸಿದ್ದಾರೆ ಮತ್ತು ಸಿತಾರ್ ಮೇಲಿನ ಅವರ ಉತ್ಸಾಹವು ಬೆಳೆಯಲಿ ಮತ್ತು ಇತರರಿಗೆ ಸ್ಫೂರ್ತಿಯನ್ನು ನೀಡಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ.
X ಪೋಸ್ಟ್ ಮಾಡಿರುವ ಮೋದಿ, ಭಾರತದ ಸಂಗೀತ ಇತಿಹಾಸವು ವೈವಿಧ್ಯತೆಯ ಸ್ವರಮೇಳವಾಗಿದೆ, ಇದು ಸಹಸ್ರಮಾನಗಳಿಂದ ವಿಕಸನಗೊಂಡ ಲಯಗಳ ಮೂಲಕ ಪ್ರತಿಧ್ವನಿಸುತ್ತದೆ ಎಂದಿದ್ದಾರೆ.
ಗಿಟಾರ್ ಉತ್ಸಾಹಿಯಾಗಿರುವ ಮತ್ತು ಆಗಾಗ್ಗೆ ಗಿಟಾರ್ ನುಡಿಸುವ ವೀಡಿಯೊಗಳನ್ನು ಹಂಚಿಕೊಳ್ಳುವ ವಾಂಗ್ ಅವರು ದೀಪಾವಳಿಯಂದು ಸಿತಾರ್ ನುಡಿಸಲು ಕಲಿಯುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
“ಸಿತಾರ್ನ ಸುಂದರ ರಾಗಗಳ ತ್ವರಿತ ಪರಿಚಯವನ್ನು ಪಡೆಯುತ್ತಿದ್ದೇನೆ. ಇಲ್ಲಿ ಕಾರ್ತಿಗಯನ್ ಸ್ವಲ್ಪ ಸಮಯದಿಂದ ಸಿತಾರ್ ಕಲಿಸುತ್ತಿದ್ದಾರೆ ಮತ್ತು ಮೂಲಭೂತ ತಂತ್ರಗಳ ಮೂಲಕ ನನಗೆ ಮಾರ್ಗದರ್ಶನ ನೀಡುವಲ್ಲಿ ಅವರು ತುಂಬಾ ತಾಳ್ಮೆಯಿಂದಿದ್ದಾರೆ. ಅನುಭವವನ್ನು ಆನಂದಿಸಿದೆ ಮತ್ತು ಶ್ರೀಮಂತ ಶಾಸ್ತ್ರೀಯ ಭಾರತೀಯ ಸಂಗೀತ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಪಡೆದಿರುವೆ” ಎಂದು ವಾಂಗ್ ಟ್ವಿಟ್ ಮಾಡಿದ್ದಾರೆ.
Getting a quick intro to the beautiful tunes of the sitar.
Karthigayan here has been learning for a while, and he has been very patient in guiding me through the basic techniques. Enjoyed the experience, and the chance to learn more about the rich classical Indian music heritage! pic.twitter.com/yLTFCxEcu1— Lawrence Wong (@LawrenceWongST) November 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.