ನವದೆಹಲಿ: ಅಕ್ಟೋಬರ್ 7 ರಂದು ಇಸ್ರೇಲಿ ನೆಲದಲ್ಲಿ ನಡೆದ ಹಮಾಸ್ ಮಾದರಿಯ ದಾಳಿಗಳನ್ನು ತಡೆಯುವ ಸಲುವಾಗಿ ತನ್ನ ಗಡಿ ಪ್ರದೇಶಗಳಲ್ಲಿ ಭಾರತವು ಡ್ರೋನ್ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ.
ಇಸ್ರೇಲ್ ಮತ್ತು ಹಮಾಸ್ ಸಂಘರ್ಷವು ಗಾಜಾ ಮತ್ತು ಇಸ್ರೇಲ್ ಎರಡರಲ್ಲೂ 8,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಸಂಘರ್ಷದಿಂದ ಭಾರತ ಎಚ್ಚೆತ್ತುಕೊಂಡಿದ್ದು, ಕಾಶ್ಮೀರದಲ್ಲಿ ಇಂತಹ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ಆರಂಭಿಸಿದೆ.
ನೆರೆಯ ದೇಶಗಳಲ್ಲಿ ನೆಲೆಸಿರುವ ಭಯೋತ್ಪಾದಕ ಗುಂಪುಗಳಿಂದ ಭಾರತ ಅನೇಕ ರೀತಿಯ ಅನಿರೀಕ್ಷಿತ ದಾಳಿಯನ್ನು ಎದುರಿಸಿದೆ. ಹೀಗಾಗಿ ಭವಿಷ್ಯದಲ್ಲಿ ಅನಾಹುತಗಳು ನಡೆದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.
ವರದಿಯ ಪ್ರಕಾರ, ಭಾರತದ ರಕ್ಷಣಾ ಅಧಿಕಾರಿಗಳು ಕಳೆದ ವಾರದಲ್ಲಿ ಕಣ್ಗಾವಲು ಮತ್ತು ವಿಚಕ್ಷಣ ಡ್ರೋನ್ಗಳ ಆರು ಮಾರಾಟಗಾರರನ್ನು ಭೇಟಿ ಮಾಡಿದ್ದಾರೆ. ಗಮನಾರ್ಹವಾಗಿ, ಹೈ-ಆಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್ಗಳು ಎಂದು ಕರೆಯಲ್ಪಡುವ ಸೌರ-ಚಾಲಿತ ಡ್ರೋನ್ಗಳನ್ನು ಡ್ರೋನ್ ಮೂಲಸೌಕರ್ಯವನ್ನು ಬೆಂಬಲಿಸಲು ಬಳಸಿಕೊಳ್ಳಲಾಗುತ್ತದೆ, ಇವು ಲ್ಯಾಂಡಿಂಗ್ಗಳ ಅಗತ್ಯವಿಲ್ಲದೇ ವಿಸ್ತೃತ ಹಾರಾಟದ ಅವಧಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.