ಜೆರುಸಲೇಂ: ಉತ್ತರ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ ಜನರನ್ನು 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಗಾಜಾಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸುವ ನಿರ್ಣಾಯಕ ನಿರ್ದೇಶನವನ್ನು ಇಸ್ರೇಲ್ ರಕ್ಷಣಾ ಪಡೆ ವಿಶ್ವಸಂಸ್ಥೆಗೆ ತಿಳಿಸಿದೆ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಇದು ಸಂಭವನೀಯ ನೆಲದ ಮೇಲಿನ ಆಕ್ರಮಣವನ್ನು ಇಸ್ರೇಲ್ ನಡೆಸಲಿದೆ ಎಂಬ ಬಲವಾದ ಸುಳಿವು ನೀಡಿದೆ. ಸರಿಸುಮಾರು 1.1 ಮಿಲಿಯನ್ ಪ್ಯಾಲೆಸ್ಟೀನಿಯನ್ನರು ವಾಡಿ ಗಾಜಾದ ಉತ್ತರದಲ್ಲಿ ನೆಲೆಸಿದ್ದಾರೆ, ಇವರ ಸ್ಥಳಾಂತರಕ್ಕೆ ಇಸ್ರೇಲ್ ನೀಡಿದ ಕರೆ ಮಹತ್ವದ ಕ್ರಮವಾಗಿದೆ. ಗಾಜಾ ನಗರದ ಕೆಳಗಿರುವ ಸುರಂಗಗಳಲ್ಲಿ ಅಡಗಿರುವ ಹಮಾಸ್ ಕಾರ್ಯಕರ್ತರ ಉಪಸ್ಥಿತಿಯಿಂದಾಗಿ ಈ ರೀತಿಯ ಆದೇಶವನ್ನು ನೀಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ.
ಇಸ್ರೇಲ್ ಯೋಧರು ಗಾಜಾದ ನಿವಾಸಿಗಳ ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಿದ್ದಾರೆ ಮತ್ತು ಹಮಾಸ್ ಭಯೋತ್ಪಾದಕರು ಅವರನ್ನು ಮಾನವ ಗುರಾಣಿಗಳಾಗಿ ಬಳಸುವ ಸಾಧ್ಯತೆ ಇರುವುದರಿಂದ ಸ್ಥಳದಿಂದ ತೆರಳುವಂತೆ ಒತ್ತಾಯಿಸಿದ್ದಾರೆ.
ಈ ಪ್ರಮುಖ ಬೆಳವಣಿಗೆಯನ್ನು ಹಂಚಿಕೊಂಡ ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಜೊನಾಥನ್ ಕಾನ್ರಿಕಸ್ ಅವರು, “ಗಾಜಾ ನಿವಾಸಿಗಳು ಸ್ಟ್ರಿಪ್ನ ದಕ್ಷಿಣ ಭಾಗಕ್ಕೆ ತೆರಳಲು ಮತ್ತು ಹಮಾಸ್ ಭಯೋತ್ಪಾದಕರಿಂದ ತಮ್ಮನ್ನು ಪ್ರತ್ಯೇಕಿಸಲು ನಾವು ಕೋರುತ್ತೇವೆ. ಅವರನ್ನು ಉಗ್ರರು ಮಾನವ ಗುರಾಣಿಗಳಾಗಿ ಬಳಸುತ್ತಿದ್ದಾರೆ” ಎಂದಿದ್ದಾರೆ. ಅಲ್ಲದೇ ಅವರ ಸ್ಥಳಾಂತರಕ್ಕೆ ಆದೇಶಿಸಿದ್ದನ್ನು ಒಪ್ಪಿಕೊಂಡಿದ್ದಾರೆ.
#WATCH | On the Israel-Palestine conflict, IDF Spokesperson Jonathan Conricus says "…The aim here is to minimise the damage to civilians. There are significant combat operations ongoing, and we are preparing for the future and the continuance of our combat operations. Out of an… pic.twitter.com/1CQaNGX1rG
— ANI (@ANI) October 13, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.