ಟೆಲ್ ಅವಿವ್: ಇಸ್ರೇಲ್ ರಕ್ಷಣಾ ಪಡೆಗಳು ಹಮಾಸ್ ಭಯೋತ್ಪಾದಕ ದಾಳಿಯ ನಡುವೆ ಅಕ್ಟೋಬರ್ 7 ರಂದು ಕೈಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಸೆರೆಹಿಡಿಯುವ ಹೆಲ್ಮೆಟ್-ಕ್ಯಾಮ್ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಕಾರ್ಯಾಚರಣೆಯು ಗಾಜಾ ಭದ್ರತಾ ಬೇಲಿ ಬಳಿ ನಡೆದಿದ್ದು, ಇಸ್ರೇಲ್ ಸೇನೆಯ ಇಲೈಟ್ ಶಾಯೆಟೆಟ್ 13 ಯುನಿಟ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ವರದಿಗಳ ಪ್ರಕಾರ, ಶಾಯೆಟೆಟ್ 13 ಕಮಾಂಡೋಗಳು 250 ಒತ್ತೆಯಾಳುಗಳನ್ನು ರಕ್ಷಿಸಿದ್ದಾರೆ ಮತ್ತು 26 ಜನರನ್ನು ಬಂಧಿಸಿದ್ದಾರೆ. ಇಸ್ರೇಲ್ ಯೋಧರ ಈ ಕಾರ್ಯಾಚರಣೆ ಅವರ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊರಜಗತ್ತಿಗೆ ತೋರಿಸಿದೆ. ಇಸ್ರೇಲ್ನಲ್ಲಿ ಹಮಾಸ್ ಉಗ್ರರ ದಾಳಿಯಲ್ಲಿ ಸತ್ತವರ ಸಂಖ್ಯೆ 1300 ದಾಟಿದೆ, 3,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸೈನಿಕರು ಸಪ್ರೆಸರ್ಗಳನ್ನು ಹೊಂದಿರುವ ಅಮೇರಿಕನ್ M-4 ಕಾರ್ಬೈನ್ಗಳೊಂದಿಗೆ ಶಸ್ತ್ರಸಜ್ಜಿತರಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಗಮನಾರ್ಹವಾಗಿ, 26-ಸೆಕೆಂಡ್ ಮಾರ್ಕ್ನಲ್ಲೊ ತಂಡದ ಒಬ್ಬಸದಸ್ಯ LAWS ಆಂಟಿ-ಆರ್ಮರ್ ಹೊಂದಿದ ರಾಕೆಟ್ ಲಾಂಚರ್ನಂತೆ ಕಾಣಿಸಿಕೊಂಡಿದ್ದಾನೆ.
The Flotilla 13 elite unit was deployed to the area surrounding the Gaza security fence in a joint effort to regain control of the Sufa military post on October 7th.
The soldiers rescued around 250 hostages alive.
60+ Hamas terrorists were neutralized and 26 were… pic.twitter.com/DWdHKZgdLw
— Israel Defense Forces (@IDF) October 12, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.