ನವದೆಹಲಿ: 1,200 ಜನರನ್ನು ಬಲಿತೆಗೆದುಕೊಂಡ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಹಮಾಸ್ ವಿರುದ್ಧ ಮುಗಬಿದ್ದಿದ್ದು, ಅದನ್ನು ಈ ಭೂಮಿಯಿಂದಲೇ ಇಲ್ಲದಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಹಮಾಸ್ ಕೈಯಲ್ಲಿ ಒತ್ತೆಯಾಳುಗಳಾಗಿ ಸಿಲುಕಿರುವ ಜನರನ್ನು ರಕ್ಷಿಸುವ ಸಲುವಾಗಿ ಅದು ನೆಲದ ಮೇಲಿನ ಕಾರ್ಯಾಚರಣೆಯನ್ನು ನಡೆಸುವ ಸುಳಿವನ್ನು ನೀಡಿದೆ.
ನೆಲದ ಆಕ್ರಮಣದ ಸುಳಿವು ನೀಡಿ ಹಮಾಸ್ ಅನ್ನು ಭೂಮಿಯ ಅಳಿಸಿಹಾಕುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಮಾಸ್ ವಿರುದ್ಧ ತನ್ನ ಯುದ್ಧವನ್ನು ನಿರ್ದೇಶಿಸಲು ತುರ್ತು ಸರ್ಕಾರವನ್ನು ರೂಪಿಸಿದ್ದಾರೆ. ಗಾಜಾದಲ್ಲಿ ಶೀಘ್ರದಲ್ಲೇ ನೆಲದ ಆಕ್ರಮಣವು ಪ್ರಾರಂಭವಾಗಲಿದೆ ಎಂದು ಸರ್ಕಾರವು ಸುಳಿವು ನೀಡಿದೆ ಮತ್ತು ಹಮಾಸ್ ಅನ್ನು ಭೂಮಿಯಿಂದ ಅಳಿಸಿಹಾಕಲಾಗುವುದು” ಎಂದು ಘೋಷಿಸಿದೆ.
“ಪ್ರತಿಯೊಬ್ಬ ಹಮಾಸ್ ಸದಸ್ಯನು ಸತ್ತ ವ್ಯಕ್ತಿ” ಎಂದು ಹೇಳಿರುವ ನೆತನ್ಯಾಹು, ಗುಂಪನ್ನು ಇಸ್ಲಾಮಿಕ್ ಸ್ಟೇಟ್ಗೆ ಹೋಲಿಸಿದ್ದಾರೆ. ಜಗತ್ತು ದಾಯೆಶ್ ಅನ್ನು ನಾಶಪಡಿಸಿದಂತೆ ನಾವು ಅವರನ್ನು ಪುಡಿಮಾಡಿ ನಾಶಪಡಿಸುತ್ತೇವೆ” ಎಂದಿದ್ದಾರೆ.
ಇಸ್ರೇಲಿ ರಕ್ಷಣಾ ಸಚಿವೆ ಯೊಯೆ ಗಲ್ಲೆಂಟ್ ಮಾತನಾಡಿ, “ನಾನು ಇಲ್ಲಿ ಎಲ್ಲರಿಗೂ ಹೇಳುತ್ತೇನೆ – ನಾವು ಹಮಾಸ್ ಎಂಬ ಈ ವಸ್ತುವನ್ನು ಅಳಿಸಿಹಾಕುತ್ತೇವೆ. ನಾವು ಅವುಗಳನ್ನು ಭೂಮಿಯಿಂದ ಅಳಿಸಿಹಾಕುತ್ತೇವೆ. ಒತ್ತೆಯಾಗಿರುವ ನಮ್ಮ ಜನರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ. ಅದು ಇಸ್ರೇಲ್ನ ಮೌಲ್ಯ ಕೂಡ ಆಗಿದೆ. ಅದಕ್ಕಾಗಿ ನಾವು ನೆಲದ ಮೇಲಿನ ಕಾರ್ಯಾಚರಣೆಯನ್ನು ಆರಂಭಿಸುತ್ತೇವೆ” ಎಂದಿದ್ದಾರೆ.
ಇಸ್ರೇಲ್ ರಕ್ಷಣಾ ವಕ್ತಾರ ಜೊನಾಥನ್ ಕಾನ್ರಿಕಸ್, ಹಮಾಸ್ ಮಕ್ಕಳ ಶಿರಚ್ಛೇದ ಮಾಡುತ್ತಿದೆ ಎಂದು ನಂಬಲು ತಮ್ಮ ಬಳಿ ಪುರಾವೆಗಳು ಮತ್ತು ಆಧಾರಗಳಿವೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.