ನವದೆಹಲಿ: ಆಘಾತಕಾರಿ ಬೆಳವಣಿಗೆಯಲ್ಲಿ, ಯೂಟ್ಯೂಬ್ ಚಾನೆಲ್ “ಸ್ಟ್ರಿಂಗ್” ಅನ್ನು ಯಾವುದೇ ವರದಿ, ಉಲ್ಲಂಘನೆಗಳು ಇಲ್ಲದೆಯೇ ಯೂಟ್ಯೂಬ್ ವೇದಿಕೆಯಿಂದ ತೆಗೆದುಹಾಕಲಾಗಿದೆ. ವಿಂದೋಹ್ ಕುಮಾರ್ ನೇತೃತ್ವದ ಸ್ಟ್ರಿಂಗ್ ರಿವೀಲ್ಸ್ ಕಮ್ಯುನಿಸ್ಟ್, ಎಡಪಂಥೀಯರ ದಾರಿತಪ್ಪಿಸುವ ಅಜೆಂಡಾಗಳನ್ನು ಬಹಿರಂಗಪಡಿಸುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿತ್ತು.
“ಸ್ಟ್ರಿಂಗ್ ಚಾನೆಲ್ ಅನ್ನು ತೆಗೆದುಹಾಕಲಾಗಿದೆ‼️ ಯಾವುದೇ ಸ್ಟ್ರೈಕ್ ಇಲ್ಲ, ಯಾವುದೇ ಉಲ್ಲಂಘನೆಯಿಲ್ಲ ಆದರೆ ನೇರವಾಗಿ ಅಳಿಸಿ ಹಾಕಲಾಗಿದೆ. ದಯವಿಟ್ಟು ಈ ಕಾರ್ಯ ಮಾಡಲು ಯಾರ ಬೂಟ್ ನೆಕ್ಕಿದ್ದೀರಿ ಎಂಬುದನ್ನು ದಯವಿಟ್ಟು ವಿವರಿಸಿ. ನೀವು ನನ್ನ ಚಾನಲ್ ಅನ್ನು ಆದಷ್ಟು ಬೇಗ ಹಿಂತಿರುಗಿಸದಿದ್ದರೆ, ನಾನು ಎಷ್ಟು ದೂರ ತಲುಪಬಲ್ಲೆ ಎಂದು ನೀವು ನೋಡಿತ್ತೀರಿ. ನೆನಪಿರಲಿ! ನಾವು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಮಾತನಾಡುವ ಏಕೈಕ ವೇದಿಕೆ YouTube ಅಲ್ಲ” ಎಂದು ಸ್ಟ್ರಿಂಗ್ ರಿವೀಲ್ಸ್ ಟ್ವಿಟ್ ಮಾಡಿದೆ.
ಯೂಟ್ಯೂಬ್ ಸ್ಟ್ರಿಂಗ್ಗೆ ಮಾಡಿರುವ ಮೇಲ್ನಲ್ಲಿ, “ನಾವು ನಿಮ್ಮ ವಿಷಯವನ್ನು ಪರಿಶೀಲಿಸಿದ್ದೇವೆ ಮತ್ತು ನಮ್ಮ ಸಮುದಾಯ ಮಾರ್ಗಸೂಚಿಗಳ ತೀವ್ರ ಅಥವಾ ಪುನರಾವರ್ತಿತ ಉಲ್ಲಂಘನೆಗಳನ್ನು ಕಂಡುಕೊಂಡಿದ್ದೇವೆ. ಈ ಕಾರಣದಿಂದಾಗಿ, ನಾವು ನಿಮ್ಮ ಚಾನಲ್ ಅನ್ನು YouTube ನಿಂದ ತೆಗೆದುಹಾಕಿದ್ದೇವೆ” ಎಂದು ಉಲ್ಲೇಖಿಸಲಾಗಿದೆ.
“ಇದು ತುಂಬಾ ಅಸಮಾಧಾನಕರ ಸುದ್ದಿ ಎಂದು ನಮಗೆ ತಿಳಿದಿದೆ, ಆದರೆ YouTube ಎಲ್ಲರಿಗೂ ಸುರಕ್ಷಿತ ಸ್ಥಳವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕೆಲಸ. ನಿಮ್ಮ ಚಾನೆಲ್ ನಮ್ಮ ನೀತಿಗಳನ್ನು ತೀವ್ರವಾಗಿ ಉಲ್ಲಂಘಿಸುತ್ತದೆ ಎಂದು ನಾವು ಭಾವಿಸಿದ್ದೇವೆ, ಪ್ಲಾಟ್ಫಾರ್ಮ್ನಲ್ಲಿರುವ ಇತರ ಬಳಕೆದಾರರನ್ನು ರಕ್ಷಿಸಲು ನಾವು ಅದನ್ನು ತೆಗೆದುಹಾಕುತ್ತೇವೆ. ಆದರೆ ನಾವು ತಪ್ಪು ಮಾಡಿದ್ದೇವೆ ಎಂದು ನಂಬಿದರೆ ಈ ನಿರ್ಧಾರದ ವಿರುದ್ಧ ನೀವು ಮೇಲ್ಮನವಿ ಸಲ್ಲಿಸಬಹುದು. ನೀತಿ ಮತ್ತು ಮೇಲ್ಮನವಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಕೆಳಗೆ ಕಾಣಬಹುದು,” ಎಂದು ಅದು ಸೇರಿಸಿದೆ.
ಯೂಟ್ಯೂಬ್ ಸ್ಟ್ರಿಂಗ್ ಚಾನಲ್ಗೆ ಹಾನಿ ಮಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸ್ಟ್ರಿಂಗ್ ಚಾನೆಲ್ನ ಹಲವಾರು ವೀಡಿಯೊಗಳನ್ನು ತೆಗೆದುಹಾಕಲಾಗಿತ್ತು. ವಿನೋದ್ ಕುಮಾರ್ “ಟೂಲ್ಕಿಟ್ ಗ್ಯಾಂಗ್” ಅನ್ನು ಬಹಿರಂಗಪಡಿಸಿದ ಸ್ಟ್ರಿಂಗ್ನ ವೀಡಿಯೊವನ್ನು ಅದು ಅಳಿಸಿಹಾಕಿತ್ತು.
String Channel removed‼️
No strike, no violation but straight delete🤷♂️@TeamYouTube @YouTube
Please explain whose boots you licked to do this to me?
If you don’t bring back my channel asap, you will see how far I’ll reach.
Mind you! YouTube is not the only platform where we can do… pic.twitter.com/GCF3Fqcz2K— String (@StringReveals) September 20, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.