ಬೆಂಗಳೂರು: ನಟ-ರಾಜಕಾರಣಿ ಪ್ರಕಾಶ್ ರಾಜ್ ಅವರ ಕೆಟ್ಟು ಹೋದ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ. ಎಂದಿನಂತೆ ಈ ಬಾರಿಯೂ ನಕಾರಾತ್ಮಕ ಟ್ವಿಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಭಾರತದ ಚಂದ್ರಯಾನ-3 ಮಿಷನ್ ಬಗ್ಗೆ ಅಪಹಾಸ್ಯ ಮಾಡುವ ಟ್ವಿಟ್ ಅನ್ನು ಅವರು ಹಂಚಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾರತದ ಬಹುನೀರಿಕ್ಷೆಯ ಚಂದ್ರಯಾನ-3ರ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗು ಹಂತದಲ್ಲಿ ಇದೆ, ವಿಜ್ಞಾನಿಗಳು ಸೇರಿದಂತೆ ಸಮಸ್ತ ಭಾರತೀಯರು ಇದಕ್ಕಾಗಿ ಸಂತಸಪಡುತ್ತಿದ್ದು, ಅಂತಿ ಗುರಿಯ ಯಶಸ್ಸಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. ದೇಶದ್ಯಾಂತ ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಸಲು ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ ಹಾಗೂ ಚಂದ್ರಯಾನ ಯೋಜನೆಯಲ್ಲಿ ಈವರೆಗಿನ ಯಶಸ್ಸಿಗೆ ಸಾಕಷ್ಟು ಪ್ರಶಂಸೆ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರು ಚಾಯ್ ಸೋಸುತ್ತಿರುವಂತಹ ವ್ಯಂಗ್ಯಚಿತ್ರ ಪೋಸ್ಟ್ ಮಾಡಿ ಪ್ರಕಾಶ್ ರಾಜ್ ಅಪಹಾಸ್ಯ ಮಾಡಿದ್ದಾರೆ.
“ತಾಜಾ ಸುದ್ದಿ: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ” ಎಂದು ಕ್ಯಾಪ್ಶನ್ ಬರೆದು ಜಸ್ಟ್ ಆಸ್ಕಿಂಗ್, ವಿಕ್ರಮ್ ಲ್ಯಾಂಡರ್ ಎಂದು ಹ್ಯಾಶ್ಟ್ಯಾಗ್ ಬರೆದಿದ್ದಾರೆ. ಅವರ ಮನಸ್ಥಿಯನ್ನು ಅನೇಕರು ಖಂಡಿಸಿದ್ದಾರೆ. ದೇಶದ ಏಳಿಗೆಯನ್ನು ಸಹಿಸದ ಅವರ ಮಾನಸಿಕತೆ ಬಗ್ಗೆ ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಭಾರತದ ಗೌರವದ ಅಪಹಾಸ್ಯ ನಿನ್ನ ನಿಜವಾದ ಬಣ್ಣವನ್ನು ತೋರಿಸುತ್ತದೆ #JustTelling
ಪರರ ಕಾಚ pic.twitter.com/zgyWyYLvgS— Pravin Shetty🇮🇳 (@ExpertShetty) August 20, 2023
Prakash raj landed on the moon before #Chandrayaan3
Soft landing 🤣🤣 pic.twitter.com/aSsIvZqDBc— Mukund kumar Jha 🇮🇳 (@iammukundkumar) August 21, 2023
I first Saw u in Salman Khan Movie then with Ajay Devgan
u played the Role of A Villain, I Liked your acting in that Role,
but didn't knew U r such a Loser in real life,
Paiso k liye apni zameer Bech dia tumneneed to block such negative people
— Bidyut Biswas (@BidyutBiswasLTI) August 21, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.