ನವದೆಹಲಿ: ‘ಹರ್ ಘರ್ ತಿರಂಗಾ’ ಅಭಿಯಾನದ ಉತ್ಸಾಹವು ಜಮ್ಮು ಮತ್ತು ಕಾಶ್ಮೀರವನ್ನು ಆವರಿಸಿದೆ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಮೊದಲು ಕೇಂದ್ರಾಡಳಿತ ಪ್ರದೇಶದಿಂದ ದೇಶಭಕ್ತಿಯ ಸ್ಪೂರ್ತಿದಾಯಕ ನಿದರ್ಶನಗಳು ಹೊರಹೊಮ್ಮುತ್ತಿವೆ. ಉತ್ತರ ಕಾಶ್ಮೀರದ ಸೊಪೋರ್ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಮುದಾಸಿರ್ ಅಹ್ಮದ್ ಸಹೋದರ ತನ್ನ ನಿವಾಸದಲ್ಲಿ ಭಾರತದ ಧ್ವಜವನ್ನು ಹಾರಿಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ.
ಹಿಜ್ಬುಲ್ ಕಮಾಂಡರ್ ಕುಟುಂಬವು ಆಗಸ್ಟ್ 13 ರಂದು ಕಿಶ್ತ್ವಾರ್ನ ದಚ್ಚನ್ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಈ ಮೂಲಕ ನಾವು ಭಾರತಕ್ಕೆ ಸೇರಿದವರು ಮತ್ತು ಭಾರತವು ಇತರರಂತೆ ತಮಗೂ ಸೇರಿದೆ ಎಂಬ ಸಂದೇಶವನ್ನು ರವಾನಿಸಿದೆ.
ಎ++ ವರ್ಗದ ಭಯೋತ್ಪಾದಕ ಹಿಜ್ಬುಲ್ ಕಮಾಂಡರ್ ಮುದಾಸಿರ್ ಅಹ್ಮದ್ ಅವರ ತಂದೆ ತಾರಿಕ್ ಹುಸೇನ್ ಗೈನೂ ಈ ಸಂದರ್ಭದಲ್ಲಿ ಮಾತನಾಡಿ, ತನ್ನ ಮಗ ತಪ್ಪು ದಾರಿಯನ್ನು ಆರಿಸಿಕೊಂಡಿದ್ದಾನೆ ಮತ್ತು ಅವನ ಕುಟುಂಬವು ಅವನ ದಾರಿ ಅನ್ನು ಸರಿಪಡಿಸಿ ಮನೆಗೆ ಕರೆತರಲು ಪ್ರಯತ್ನಿಸಿದೆ ಎಂದು ಹೇಳಿದರು. “ನಾವು ರಾಷ್ಟ್ರಧ್ವಜವನ್ನು ಹಾರಿಸಿದ್ದೇವೆ ಮತ್ತು ಎಲ್ಲರೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸಿದ್ದೇವೆ. ನನ್ನ ಮಗ ತಪ್ಪು ದಾರಿಯಲ್ಲಿ ಸಾಗಿದ್ದಾನೆ ಮತ್ತು ಅವನನ್ನು ಮರಳಿ ಕರೆತರುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ” ಎಂದು ಗೈನೂ ಹೇಳಿದ್ದಾರೆ.
ಅಹ್ಮದ್ನ ತಾಯಿ ಪ್ರವೀಣಾ ಬೇಗಂ ಕೂಡ ತನ್ನ ಮಗನ ವಾಪಸಾತಿಗೆ ಆಶಾದಾಯಕಳಾಗಿದ್ದಾರೆ ಮತ್ತು ಅವನು ಬದುಕುತ್ತಿರುವ ಭಾರತ ವಿರೋಧಿ ಜೀವನದಿಂದ ಹೊರಬಂದು ಶರಣಾಗಲಿ ಎಂದು ಹಾರೈಸಿದ್ದಾರೆ. “ಅವನು ಹಿಂತಿರುಗಿ ಬಂದು ಭದ್ರತಾ ಪಡೆಗಳ ಮುಂದೆ ಶರಣಾಗಬೇಕೆಂದು ನಾವು ಬಯಸುತ್ತೇವೆ. ಅವನನ್ನು ಮರಳಿ ಕರೆತರುವಂತೆ ನಾವು ಭದ್ರತಾ ಪಡೆಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.