ನವದೆಹಲಿ: ಭಾರತ ಮತ್ತು ಚೀನಾ ಕಳೆದ ಮೂರು ವರ್ಷಗಳಲ್ಲಿ ಮಾತುಕತೆಗಳ ಮೂಲಕ ಪೂರ್ವ ಲಡಾಖ್ನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಐದು-ಆರು ಘರ್ಷಣೆ ಪಾಯಿಂಟ್ಗಳಲ್ಲಿ ಪ್ರಗತಿ ಸಾಧಿಸಿವೆ ಮತ್ತು ಉಳಿದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ಹೇಳಿದ್ದಾರೆ.
ಈ ವಿಷಯದಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆಗಳನ್ನು ತಿರಸ್ಕರಿಸಿದ ಅವರು, “ಸಮಸ್ಯೆ ಸಂಕೀರ್ಣತೆಗಳನ್ನು ಒಳಗೊಂಡಿವೆ. ಆದರೆ ಎರಡೂ ಕಡೆಯವರು ಪರಿಹಾರಗಳನ್ನು ಹುಡುಕಲು ತೊಡಗಿದ್ದಾರೆ. ವ್ಯಾಪಕವಾದ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ನಂತರ ಉಭಯ ಪಕ್ಷಗಳು ಹಲವಾರು ಪ್ರದೇಶಗಳಿಂದ ಸೇನಾ ಹಿಂಪಡೆಯುವಿಕೆ ಪೂರ್ಣಗೊಳಿಸಿವೆ ಎಂದರು.
ಗಡಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸರ್ಕಾರದ ಆದ್ಯತೆಯನ್ನು ಎತ್ತಿ ಹಿಡಿದ ಜೈಶಂಕರ್, ಸೈನ್ಯವನ್ನು ತ್ವರಿತವಾಗಿ ನಿಯೋಜಿಸಲು ಮತ್ತು ಚೀನಾದ ಮಿಲಿಟರಿಯ ಚಲನೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಶಸ್ತ್ರ ಪಡೆಗಳು ಈಗ ಉತ್ತಮ ಸ್ಥಾನದಲ್ಲಿವೆ ಎಂದು ಹೇಳಿದರು.
2014 ರ ನಂತರ, ಭಾರತೀಯ ಮಿಲಿಟರಿ ಮತ್ತು ಭಾರತೀಯ ವಾಯುಪಡೆಯು ಚೀನಾದ ಯಾವುದೇ ದುಸ್ಸಾಹಸವನ್ನು ಉತ್ತಮವಾಗಿ ಎದುರಿಸಲು ಸಮರ್ಥವಾಗಿದೆಯೇ ಎಂದು ನೀವು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರವು “ಹೌದು, ಸಂಪೂರ್ಣವಾಗಿ ಸಮರ್ಥವಾಗಿದೆ” ಎಂಬುದಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.