ಲಂಡನ್: ಭಾರತದ ಸಂವಿಧಾನ ರಚನೆಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಲಂಡನ್ನಲ್ಲಿರುವ ಮನೆಯನ್ನು ಭಾರತವು ಸಂಪೂರ್ಣವಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. 1920ರಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭ ಅಂಬೇಡ್ಕರ್ ಅವರು ವಾಸಿಸುತ್ತಿದ್ದ 3.1 ಮಿಲಿಯನ್ ಪೌಂಡ್ ವೆಚ್ಚದ 3 ಅಂತಸ್ತಿನ ಈ ಕಟ್ಟಡವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಕೆ.ಯಲ್ಲಿರುವ ಭಾರತೀಯ ರಾಯಭಾರ ತಿಳಿಸಿದೆ.
ಪಶ್ಚಿಮ ಲಂಡನ್ನ 10 ಕಿಂಗ್ ಹೆನ್ರಿಸ್ ರಸ್ತೆಯಲ್ಲಿರುವ 2,050 ಚದರ ಅಡಿಯ ಈ ಕಟ್ಟಡವನ್ನು ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ನೆರವು ಸಚಿವಾಲಯವು ಲಂಡನ್ ಮೂಲದ ಭಾರತೀಯ ರಾಯಭಾರದ ಮೂಲಕ ಇದನ್ನು ಖರೀದಿಸಿದೆ ಎಂದು ಯು.ಕೆ.ಯ ಅಂಬೇಡ್ಕರ್ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಂತೋಷ್ ದಾಸ್ ತಿಳಿಸಿದ್ದಾರೆ.
ಈ ಕಟ್ಟಡದ ಆಸ್ತಿಯನ್ನು ಎಸ್ಟೇಟ್ ಏಜೆಂಟ್ ಸಹಾಯದಿಂದ 2014ರಲ್ಲಿ ಮಾರಾಟಕ್ಕೆ ಇರಿಸಲಾಗಿತ್ತು. ಇದನ್ನು ನವೀಕರಿಸಿ ಸ್ಮಾರಕವನ್ನಾಗಿ ಪರಿವರ್ತಿಸಲಾಗುವುದು ಎನ್ನಲಾಗಿದೆ. ಐರೋಪ್ಯ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ಅಂಬೇಡ್ಕರ್ ಅವರ ಮನೆಗೆ ಭೇಟಿ ನೀಡಲು ಉತ್ತಮ ಅವಕಾಶವಾಗಿದೆ ಎಂದು ದಾಸ್ ಹೇಳಿದ್ದಾರೆ.
1956ರಲ್ಲಿ ನಿಧನರಾದ ಅಂಬೇಡ್ಕರ್ ಅವರಿಗೆ 1990ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.