ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಜಿ-20 ಶೃಂಗಸಭೆ ಜುಲೈ 31ರಂದು ಆರಂಭವಾಗಿದ್ದು, ಪ್ರಪಂಚಾದ್ಯಂತ ಆಗಮಿಸಿರುವ ಗಣ್ಯರು ನಗರದ ಪಾರಂಪರಿಕತೆ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮೈಸೂರು ನಗರದ ಖಾಸಗಿ ಹೋಟೆಲ್ನಲ್ಲಿ ಪಾರಂಪರಿಕತೆ ಬಗ್ಗೆ ಪ್ರತಿನಿಧಿಗಳು ಸಮಾಲೋಚನೆ ನಡೆಸಿದರು.
ಅಮೆರಿಕ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಜಪಾನ್, ಭಾರತ, ಫ್ರಾನ್ಸ್, ಜರ್ಮನಿ ಸೇರಿ 20 ದೇಶಗಳ 250ಕ್ಕೂ ಹೆಚ್ಚು ಗಣ್ಯರು ಆಗಮಿಸಿದ್ದಾರೆ. ಶೃಂಗಸಭೆಯ ನಂತರ ವಿದೇಶಿ ಪ್ರತಿನಿಧಿಗಳಿಗೆ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 1ರಂದು ಸಂಜೆ ಅರಮನೆ ವೀಕ್ಷಣೆ, ಆಗಸ್ಟ್ 2ರಂದು ಕೆಆರ್ಎಸ್, ಶ್ರೀರಂಗಪಟ್ಟಣ ಹಾಗೂ ಆಗಸ್ಟ್ 3ರಂದು ಸೋಮನಾಥಪುರ ವೀಕ್ಷಿಸಲಿದ್ದಾರೆ.
ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮೂರು ದಿನಗಳ ಕಾಲ ಅರಮನೆ ವೀಕ್ಷಣೆಯನ್ನು ನಿರ್ಬಂಧಿಸಲಾಗಿದೆ. ಭಾರತವು 100ನೇ ಜಿ-20 ಶೃಂಗಸಭೆಯ ಆತಿಥ್ಯ ವಹಿಸಿದ್ದು, ಈ ಸಭೆಯು ಈಗಾಗಲೇ ಬೆಂಗಳೂರು, ಹಂಪಿಯಲ್ಲಿ ನಡೆದಿದೆ.
ವಿದೇಶಿ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಹೋಟೆಲ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೆ ಸಿಸಿ ಟಿವಿ ಕ್ಯಾಮೆರಾದ ಮೂಲಕ ನಿಗಾವಹಿಸಲಾಗಿದೆ. ಗಣ್ಯರ ಆಗಮನದ ಮೇಲೆ ಯಾವುದೇ ಭದ್ರತಾ ಲೋಪ ಆಗದಂತೆ ಮೈಸೂರು ನಗರ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.