ಭುವನೇಶ್ವರ್: ಒರಿಸ್ಸಾದ ಮಲ್ಕಾನ್ಗಿರಿಯಲ್ಲಿ ಶುಕ್ರವಾರ ಸುಮಾರು 80 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.
ಕಳೆದ ತಿಂಗಳು ಒಟ್ಟು 800 ನಕ್ಸಲರು ಶರಣಾಗಿದ್ದರು, ಇದೀಗ 80 ಮಂದಿ ಶರಣಾಗಿದ್ದು ಪೊಲೀಸರ ಪ್ರಯತ್ನಕ್ಕೆ ಸಂದ ಜಯವಾಗಿದೆ.
ಆದರೆ ಈ ಶರಣಾಗತಿಯನ್ನು ಖಂಡಿಸಿ ನಕ್ಸಲರು ಬಂದ್ಗೆ ಕರೆ ನೀಡಿದ್ದಾರೆ. ಇದೊಂದು ನಕಲಿ ಶರಣಾಗತಿ, ಪೊಲೀಸರು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಬಲವಂತವಾಗಿ ಅವರನ್ನು ಶರಣಾಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಂದ್ ಕರೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಭದ್ರತೆಯನ್ನು ಬಿಗಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.