ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ವಾಶ್ರೂಮ್ನೊಳಗೆ ವಿಡಿಯೋಗ್ರಫಿ ಮಾಡಿದ ಆರೋಪದ ಮೇಲೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯು) ಬುಧವಾರ ಈ ವಿಷಯವನ್ನು ಕೈಗೆತ್ತಿಕೊಂಡಿದೆ
“ನಾವು ಈ ವಿಷಯವನ್ನು ತೆಗೆದುಕೊಂಡಿದ್ದೇವೆ. ಸದಸ್ಯೆ ಖುಷ್ಬು ಸುಂದರ್ ಇಂದು ವಿಚಾರಣೆಗೆ ಹೋಗುತ್ತಿದ್ದಾರೆ” ” ಎಂದು NCW ನ ಅಧ್ಯಕ್ಷೆ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ.
“ವಿದ್ಯಾರ್ಥಿನಿ ವಾಶ್ರೂಮ್ನಲ್ಲಿ ಇರುವಾಗ ಅವರ ಕಾಲೇಜು ಸಹಪಾಠಿಗಳು ಚಿತ್ರೀಕರಿಸಿದ ವಿಷಯವನ್ನು ಪರಿಶೀಲಿಸಲು ಉಡುಪಿಗೆ ಹೋಗುತ್ತಿದ್ದೇನೆ. ಇಂತಹ ಚಟುವಟಿಕೆಗಳಲ್ಲಿ ಮಕ್ಕಳು ಮಗ್ನರಾಗುವುದನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ರಾಷ್ಟ್ರೀಯ ಮಹಿಳಾ ಯೋಗದ ಸದಸ್ಯಳಾಗಿ ನಾನು ವಿಷಯವನ್ನು ಪರಿಶೀಲಿಸುತ್ತೇನೆ, ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತೇನೆ, ಪೊಲೀಸರನ್ನು ಭೇಟಿಯಾಗುತ್ತೇನೆ ಮತ್ತು ಕಾಲೇಜಿಗೂ ಭೇಟಿ ನೀಡುತ್ತೇನೆ. ಹೆಣ್ಣಿನ ಘನತೆಯ ಜೊತೆ ಯಾರೂ ಆಟವಾಡುವಂತಿಲ್ಲ” ಎಂದು ಖುಷ್ಬು ಸುಂದರ್ ಹೇಳಿದ್ದಾರೆ.
ಪ್ರಕರಣದಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಸದ್ದು ಮಾಡಿದ ಬಳಿಕ ಘಟನೆ ಗಂಭೀರತೆ ಪಡೆದುಕೊಂಡಿದೆ. ಅಲ್ಲದೆ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಹಿಂದೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ವಿಡಿಯೋ ಮಾಡಿ ಅದನ್ನು ಮುಸ್ಲಿಂ ಸಮುದಾಯದ ಯುವತಿಯರು ತಮ್ಮ ಸಮುದಾಯದ ಪುರುಷರಿಗೆ ಫಾರ್ವರ್ಡ್ ಮಾಡಿದ್ದಾರೆ ಎಂಬ ಆರೋಪವೂ ಇದೆ.
We have taken it up. Member @khushsundar is going for an inquiry today. https://t.co/x1VXBdfmc9
— Rekha Sharma (@sharmarekha) July 26, 2023
Heading to Udupi to look into the issue where girls were filmed in a washroom by their fellow girl college mates. It is extremely saddening to see children indulging in such activities. As a @NCWIndia member, I will be looking into the matter, speaking with the students, meeting…
— KhushbuSundar (@khushsundar) July 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.