ನವದೆಹಲಿ: ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರಲ್ಲಿ ಭಾರತೀಯ ಅಥ್ಲೀಟ್ಗಳು ಒಟ್ಟು 27 ಪದಕಗಳನ್ನು ಗೆದ್ದು ಮಹತ್ವದ ಸಾಧನೆ ಮಾಡಿದ್ದಾರೆ.
ಭಾನುವಾರದ ಅಂತಿಮ ದಿನದಂದು ಎಂಟು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತೀಯ ಕ್ರೀಡಾಪಟುಗಳು ಗೆದ್ದುಕೊಂಡಿದ್ದಾರೆ. ಹೀಗಾಗಿ ಒಟ್ಟು ಪದಕದ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇದರಲ್ಲಿ 6 ಬಂಗಾರದ ಪದಕ, 12 ಬೆಳ್ಳಿಯ ಪದಕ ಮತ್ತು 9 ಕಂಚಿನ ಪದಕವಾಗಿದೆ.
ಪ್ರಧಾನಮಂತ್ರಿನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಕ್ರೀಡಾಳುಗಳ ಸಾಧನೆಯನ್ನು ಕೊಂಡಿದ್ದಾರೆ.
“25 ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 ರಲ್ಲಿ ಭಾರತೀಯ ತಂಡದಿಂದ ಅತ್ಯುತ್ತಮ ಪ್ರದರ್ಶನ! ನಮ್ಮ ಕ್ರೀಡಾಪಟುಗಳು 27 ಪದಕಗಳನ್ನು ಗೆದ್ದಿದ್ದಾರೆ, ಚಾಂಪಿಯನ್ಶಿಪ್ಗಳ ಆವೃತ್ತಿಯಲ್ಲಿ ವಿದೇಶಿ ನೆಲದಲ್ಲಿ ಅತ್ಯಧಿಕ ಪದಕಗಳ ಸಂಖ್ಯೆ ಇದಾಗಿದೆ. ಈ ಸಾಧನೆಗಾಗಿ ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಇದು ನಮ್ಮ ಹೃದಯವನ್ನು ಹೆಮ್ಮೆಯಿಂದ ತುಂಬಿಸುತ್ತದೆ” ಎಂದಿದ್ದಾರೆ.
ಬಂಗಾರದ ಪದಕ ಜಯಿಸಿದವರೆಂದರೆ ಮಹಿಳೆಯರ 100 ಮೀಟರ್ ಹರ್ಡಲ್ಸ್ನಲ್ಲಿ ಜ್ಯೋತಿ ಯರ್ರಾಜಿ, ಪುರುಷರ ಟ್ರಿಪಲ್ ಜಂಪ್ನಲ್ಲಿ ಅಬ್ದುಲ್ಲ ಅಬೂಬಕ್ಕರ್, ಮಹಿಳೆಯರ 300 ಮೀಟರ್ ಸ್ಟೀಪಲ್ಚೇಸ್ನಲ್ಲಿ ಪಾರುಲ್ ಚೌದರಿ, ಪುರುಷರ 1500 ಮೀಟರ್ ಓಟದಲ್ಲಿ ಅಜಯ್ ಕುಮಾರ್ ಸರೋಜ್, ಪುರುಷರ ಶಾರ್ಟ್ ಪುಟ್ನಲ್ಲಿ ತೇಜಂದರ್ ಪಾಲ್ ಸಿಂಗ್ ಟೂರ್. ಮಿಕ್ಸ್ಡ್ 4×400 ಮೀಟರ್ ರಿಲೇ ಟೀಮ್ ಬಂಗಾರದ ಪದಕವನ್ನು ಭಾರತದ ಪರವಾಗಿ ಜಯಿಸಿದೆ.
Outstanding performance by the Indian contingent at the 25th Asian Athletics Championship 2023!
Our athletes won 27 medals, the highest medal tally on foreign soil in an edition of the Championships. Congrats to our athletes for this achievement. It fills our hearts with pride. pic.twitter.com/vjYlSLDvnJ
— Narendra Modi (@narendramodi) July 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.