ಬೆಂಗಳೂರು: ಇಂದು ದೇಶದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್ ಉಡಾವಣೆಗೊಂಡಿದೆ. ಇದಕ್ಕಾಗಿ ಸಮಸ್ತ ಭಾರತೀಯರು ಸಂಸತದಲ್ಲಿದ್ದಾರೆ ಮತ್ತು ಸಂಪೂರ್ಣ ಮಿಷನ್ ಯಶಸ್ವಿಯಾಗಲಿದೆ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಕೆಲವರಿಗೆ ಮಾತ್ರ ಇಸ್ರೋ ವಿಜ್ಞಾನಿಗಳು ತಿರುಪತಿಗೆ ತೆರಳಿ ಪೂಜೆ ನೆರವೇರಿಸಿದ್ದು ಆಕಾಶವೇ ಕಳಚಿ ಬಿದ್ದಂತಾಗಿದೆ.
ಚಂದ್ರಯಾನ-3 ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿದ ನಿಲುವನ್ನು ಕೆಲವು ಸ್ವಯಂಘೋಷಿಸಿತ ಬುದ್ಧಿಜೀವಿಗಳು ಆಕ್ಷೇಪಿಸಿದ್ದಾರೆ. ಆದರೆ, ಇದನ್ನು ಆಕ್ಷೇಪಿಸುವ ಖಂಡನಾ ಹೇಳಿಕೆಯಲ್ಲಿ ಎಡವಟ್ಟು ಮಾಡಿದ್ದಾರೆ. ಚಂದ್ರಯಾನ ಎಂದು ಹೇಳುವ ಬದಲು ಮಂಗಳಯಾನ ಎಂದಿದ್ದಾರೆ. ಈ ಎಡವಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್. ಸಂತೋಷ್ ಅವರು ಈ ಬಗ್ಗೆ ಟ್ವಿಟ್ ಮಾಡು, ಚಂದ್ರಯಾನಕ್ಕೂ ಮಂಗಳಯಾನಕ್ಕೂ ಇವರಿಗೆ ವ್ಯತ್ಯಾಸ ಗೊತ್ತಿಲ್ಲದವರು ಎಲ್ಲದರಲ್ಲೂ ಕಲ್ಲು ಹುಡುಕುತ್ತಿದ್ದಾರೆ ಎಂದಿದ್ದಾರೆ.
ಚಂದ್ರಯಾನ , ಮಂಗಳಯಾನದ ನಡುವಿನ ಅಂತರ ಗೊತ್ತಿಲ್ಲದ , ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಿರುವ , ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು ….!!!! pic.twitter.com/FwPVu3IdZF
— B L Santhosh (@blsanthosh) July 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.