ನವದೆಹಲಿ: ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ (IAF) ಅಂತಿಮವಾಗಿ ಪೂರ್ಣ ಪಡೆಯ ಥಿಯೇಟರ್ ಕಮಾಂಡ್ಗಳನ್ನು ಹೊಂದಲು ಮುಂದಾಗಿವೆ.
ಶೀಘ್ರದಲ್ಲೇ ಸೇನೆ, ವಾಯುಸೇನೆ, ನೌಕಾಪಡೆಯ ಐದು ತ್ರಿ-ಸೇವಾ ಥಿಯೇಟರ್ ಕಮಾಂಡ್ ರಚನೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಸಮಗ್ರ ಯುದ್ಧ ಯಂತ್ರದೊಂದಿಗೆ ಭಾರತದ ಸೇನಾ ನಿರ್ವಹಣೆ ಶಾಶ್ವತವಾಗಿ ಬದಲಾಗಲಿದೆ ಮತ್ತು ಭವಿಷ್ಯದ ಯುದ್ಧಗಳಿಗಾಗಿ ಭಾರತ ಸಮಗ್ರ ರೀತಿಯನಲ್ಲಿ ಸನ್ನದ್ಧವಾಗುವುದನ್ನು ಇದು ಖಾತ್ರಿಪಡಿಸಲಿದೆ.
ಭಾರತದ ಪರಮಾಣು ಸ್ವತ್ತುಗಳನ್ನು ನಿರ್ವಹಿಸಲು ದೇಶವು ಪ್ರಸ್ತುತ ಎರಡು ತ್ರಿ-ಸೇವಾ ಕಮಾಂಡ್ಗಳನ್ನು ಹೊಂದಿದೆ, ಅಂಡಮಾನ್ ಆಂಡ್ ನಿಕೋಬಾರ್ ಕಮಾಂಡ್ (ANC) ಮತ್ತು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್. ಹಾಗೆಯೇ 17 ವೈಯಕ್ತಿಕ ಸೇವಾ ಕಮಾಂಡ್ಗಳು ಇವೆ. ಪ್ರಾಥಮಿಕ ಯೋಜನೆಗಳ ಪ್ರಕಾರ, ಭಾರತೀಯ ಸಶಸ್ತ್ರ ಪಡೆಗಳು ಈ ವಿಭಿನ್ನ ಕಮಾಂಡ್ಗಳನ್ನು ಐದು ಥಿಯೇಟರ್ ಕಮಾಂಡ್ಗಳಾಗಿ ವಿಲೀನಗೊಳಿಸುತ್ತವೆ. ಥಿಯೇಟರ್ ಕಮಾಂಡ್ ಎನ್ನುವುದು ಯುದ್ಧದ ಭೂಮಿಯಲ್ಲಿ ಎಲ್ಲಾ ಮಿಲಿಟರಿ ಸ್ವತ್ತುಗಳನ್ನು ನಿಯಂತ್ರಿಸಲು ವಿನ್ಯಾಸಗೊಳಿಸಲಾದ ರಚನೆಯಾಗಿದೆ.
ಹೊಸ ರಚನೆಯ ಅಡಿಯಲ್ಲಿ, ಎಲ್ಲಾ ಥಿಯೇಟರ್ ಕಮಾಂಡರ್ಗಳು ನೇರವಾಗಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಿಗೆ ವರದಿ ಮಾಡುತ್ತಾರೆ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದಂತಹ ರಾಷ್ಟ್ರಗಳಲ್ಲೂ ಇದೇ ತರನಾದ ಪದ್ಧತಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.