ನವದೆಹಲಿ: ಕೆನಡಾದ ಒಟ್ಟಾವಾದಲ್ಲಿನ ತನ್ನ ಹೈಕಮಿಷನರ್ ಮತ್ತು ಟೊರೊಂಟೊದಲ್ಲಿನ ಕಾನ್ಸುಲೇಟ್ ಜನರಲ್ ಅವರ ಫೋಟೋ ಒಳಗೊಂಡ ಪೋಸ್ಟರ್ಗಳನ್ನು ಖಲಿಸ್ತಾನಿಗಳು ಸಮಾವೇಶ, ಮೆರವಣಿಗೆಗಳಲ್ಲಿ ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ತನ್ನ ಅಧಿಕಾರಿಗಳಿಗೆ ಬೆದರಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ಭಾರತವು ಕೆನಡಾದ ಅಧಿಕಾರಿಗಳಿಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ಪೋಸ್ಟರ್ ಪ್ರಕಾರ, ಖಲಿಸ್ತಾನ್ ಸ್ವಾತಂತ್ರ್ಯ ಸಮಾವೇಶವನ್ನು ಜುಲೈ 8 ರಂದು ಆಯೋಜಿಸಲಾಗಿದೆ. ಈ ಸಮಾವೇಶದ ಇತ್ತೀಚಿಗೆ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆ ಪಟ್ಟಣದ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ಕೊಲೆಯಾದ ಖಲಿಸ್ತಾನ್ ಪರ ಪಾದ್ರಿ ಹರ್ಜಿತ್ ಸಿಂಗ್ ನಿಜ್ಜರ್ ಅವರ ಹೆಸರಿನಲ್ಲಿ ನಡೆಯುತ್ತಿದೆ.
ಪೋಸ್ಟರ್ನಲ್ಲಿ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಟೊರೊಂಟೊದಲ್ಲಿರುವ ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ ಅವರಿಗೆ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಭಾರತ ಕೆನಡಾದಲ್ಲಿನ ಅಧಿಕಾರಿಗಳ ಜೊತೆ ವಿಷಯ ಪ್ರಸ್ತಾಪಿಸಿ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಕೆನಡಾದ ಗ್ಲೋಬಲ್ ಅಫೇರ್ಸ್, ದೇಶದ ವಿದೇಶಾಂಗ ಸಚಿವಾಲಯ, ರಾಜತಾಂತ್ರಿಕ ಭದ್ರತೆಯ ಜವಾಬ್ದಾರಿ ಹೊಂದಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಮತ್ತು ಒಟ್ಟಾವಾ ಮತ್ತು ಟೊರೊಂಟೊ ಪೊಲೀಸ್ ಇಲಾಖೆಗಳಿಗೆ ಭಾರತವು ತನ್ನ ಅಧಿಕಾರಿಗಳ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಭಾರತವು ಕಳವಳ ವ್ಯಕ್ತಪಡಿಸಿದೆ ಹಿರಿಯ ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.