ಬೀಜಿಂಗ್: ಕೊರೋನಾವನ್ನು ಜಗತ್ತಿಗೆ ಹಂಚಿದ ಚೀನಾ ಈಗ ತಾನೇ ಸಾಂಕ್ರಾಮಿಕದ ಕೂಪದೊಳಗೆ ಬಿದ್ದು ವಿಲವಿಲ ಒದ್ದಾಡುತ್ತಿದೆ. ಅಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅಧೋಃಸ್ಥಿತಿಗೆ ತಲುಪುತ್ತಿದೆ. ಇತ್ತೀಚಿಗೆ ಬಹಿರಂಗಗೊಂಡ ವರದಿಯೊಂದು ಅಲ್ಲಿನ ಯುವಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದೆ.
ದಾಖಲೆಯ ಮಟ್ಟದಲ್ಲಿ ಚೀನಾದ ಯುವಕರು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ವೃತ್ತಿಪರವಾಗಿ ಮತ್ತು ಭಾವನಾತ್ಮಕವಾಗಿ ಹೋರಾಡುತ್ತಿದ್ದಾರೆ ಎಂದು ವರದಿ ಹೇಳಿಕೆ. ಸಾಂಕ್ರಾಮಿಕ ರೋಗ ಕೊರೋನಾದಿಂದ ಆ ದೇಶವು ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ವರದಿ ಬಹಿರಂಗಗೊಂಡಿದ್ದು, ಆ ದೇಶ ಎದುರಿಸುತ್ತಿರುವ ಕರಾಳತೆಯತ್ತ ಬೆಳಕು ಚೆಲ್ಲಿದೆ.
ಇತ್ತೀಚಿಗೆ ತಮ್ಮ ದೇಶದ ಯುವಕರಿಗೆ ಕರೆ ನೀಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು, ಯುವಕರು ಮ್ಯಾನುವಲ್ ಆಗಿ ಕೆಲಸ ಮಾಡುವ ಅಥವಾ ತಮ್ಮ ಸ್ವಂತ ಊರುಗಳಿಗೆ ಹೋಗುವದುನ್ನು ಯೋಚಿಸುವುದನ್ನು ನಿಲ್ಲಿಸಬೇಕು ಎಂದಿದ್ದರು. ಈ ಮೂಲಕ ಕಹಿ ತಿನ್ನುವುದನ್ನು ಕಲಿಯಬೇಕು ಅಥವಾ ಕಷ್ಟಗಳನ್ನು ಸಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು.
ಆದರೆ ಅಧ್ಯಕ್ಷ ಮಾತು ಅನೇಕ ಯುವ ಚೀನಿಯರಿಗೆ ಮನವರಿಕೆಯಾಗಿಲ್ಲ. ಕುಗ್ಗುತ್ತಿರುವ ಉದ್ಯೋಗ ಮಾರುಕಟ್ಟೆ, ಕುಸಿದ ವೇತನ ಮತ್ತು ದೀರ್ಘಾವಧಿಯ ಕೆಲಸದ ಸಮಯ ಅವರನ್ನು ಕಂಗೆಡುವಂತೆ ಮಾಡುತ್ತಿದೆ. ಕಷ್ಟಪಟ್ಟು ಅಧ್ಯಯನ ಮಾಡಿ ಕಾಲೇಜು ಅಥವಾ ಪದವಿ ಶಾಲಾ ಪದವಿ ಪಡೆದಿದ್ದೇವೆ. ಆದರೆ ಸರ್ಕಾರವು ಕಷ್ಟಗಳನ್ನು ಸಹಿಸಿಕೊಳ್ಳಲು ಹೇಳುತ್ತಿದೆ ಎಂದು ಬೇಸರ ತೋಡಿಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ, ಈ ವರ್ಷ ಚೀನಾದಲ್ಲಿ ಪ್ರತಿ ಐದು ಕಾಲೇಜು ಪದವೀಧರರಲ್ಲಿ ಒಬ್ಬರು ನಿರುದ್ಯೋಗಿಗಳಾಗಿದ್ದಾರೆ.
ಆದರೆ ತನ್ನ ದೇಶದ ದುಃಸ್ಥಿತಿಯನ್ನು ಜಗತ್ತಿನ ಮುಂದೆ ಬಹಿರಂಗವಾಗದಂತೆ ಚೀನಾ ಆಡಳಿತ ಜಾಗರೂಕವಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.