ಸಿಡ್ನಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮಂಗಳವಾರ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾಕ್ಕೆ ಆಗಮಿಸಿ ಭಾರತೀಯ ವಲಸಿಗರಿಂದ ಅದ್ಧೂರಿ ಸ್ವಾಗತವನ್ನು ಪಡೆದು. ಸುಮಾರು 20000 ಸ್ಥಳೀಯರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಇಲ್ಲಿ ಜಮಾಯಿಸಿದ್ದರು.
ವೇದ ಪಠಣಗಳು ಮತ್ತು ಸಾಂಪ್ರದಾಯಿಕ ಶುಭಾಶಯಗಳ ಮೂಲಕ ಪ್ರಧಾನಿ ಮೋದಿ ಮತ್ತು ಅಲ್ಬನೀಸ್ ಅವರ ಆಗಮನವನ್ನು ಅದ್ಧೂರಿಗೊಳಿಸಲಾಯಿತು.
ಪ್ರಧಾನಿ ಮೋದಿ ಅವರು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ಇನ್ನು ಮುಂದೆ ನೀವು ನಿಮ್ಮ ಪ್ರಧಾನಿಯನ್ನು ನೋಡಲು ಇನ್ನೂ 28 ವರ್ಷ ಕಾಯಬೇಕಾಗಿಲ್ಲ ಎಂದು ಭರವಸೆ ನೀಡಿದರು.
“2014 ರಲ್ಲಿ, ನೀವು ಮತ್ತೊಮ್ಮೆ ಭಾರತೀಯ ಪ್ರಧಾನಿಗಾಗಿ 28 ವರ್ಷಗಳವರೆಗೆ ಕಾಯಬೇಕಾಗಿಲ್ಲ ಎಂದು ನಾನು ಭರವಸೆ ನೀಡಿದ್ದೆ. ಹಾಗಾಗಿ ನಾನು ಮತ್ತೊಮ್ಮೆ ಸಿಡ್ನಿಯಲ್ಲಿದ್ದೇನೆ. ನಾನು ಒಬ್ಬಂಟಿಯಾಗಿ ಬಂದಿಲ್ಲ. ನನ್ನ ಆಸ್ಟ್ರೇಲಿಯಾದ ಸಹವರ್ತಿ ಆಂಥೋನಿ ಅಲ್ಬನೀಸ್ ನನ್ನೊಂದಿಗೆ ಬಂದಿದ್ದಾರೆ” ಎಂದು ಮೋದಿ ಹೇಳಿದರು.
ಈ ವೇಳೆ ಮೋದಿ ಪಾರ್ಮಟ್ಟಾ ಲಾರ್ಡ್ ಮೇಯರ್ ಆಗಿ ಸಮೀರ್ ಪಾಂಡೆ ಅವರ ಆಯ್ಕೆಯನ್ನು ಹೈಲೈಟ್ ಮಾಡಿದರು ಮತ್ತು ಸಿಡ್ನಿಯ ಹ್ಯಾರಿಸ್ ಪಾರ್ಕ್ ಪ್ರದೇಶವನ್ನು ‘ಲಿಟಲ್ ಇಂಡಿಯಾ’ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
“ಭಾರತ-ಆಸ್ಟ್ರೇಲಿಯಾ ಬಾಂಧವ್ಯದ ಬಗ್ಗೆ ಮಾತನಾಡಿದ ಮೋದಿ, “ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಸಂಬಂಧಗಳು 3 ಸಿ (ಕಾಮನ್ವೆಲ್ತ್, ಕ್ರಿಕೆಟ್, ಕರಿ), 3D (ಡೆಮಾಕ್ರಸಿ, ಡಯಾಸ್ಪೊರಾ, ದೋಸ್ತಿ) ಮತ್ತು 3E (ಎನರ್ಜಿ, ಎಕಾನಮಿ , ಎಜುಕೇಶನ್) ಗಳನ್ನು ಮೀರಿವೆ ಎಂದು ನಾನು ನಂಬುತ್ತೇನೆ. ಭಾರತ-ಆಸ್ಟ್ರೇಲಿಯಾ ಸಂಬಂಧವು ಪರಸ್ಪರ ನಂಬಿಕೆ ಮತ್ತು ಪರಸ್ಪರ ಗೌರವವನ್ನು ಆಧರಿಸಿದೆ” ಎಂದರು.
“ನಮ್ಮ ಜೀವನಶೈಲಿ ವಿಭಿನ್ನವಾಗಿರಬಹುದು ಆದರೆ ಈಗ ಯೋಗ ಕೂಡ ನಮ್ಮನ್ನು ಸಂಪರ್ಕಿಸುತ್ತದೆ. ನಾವು ಕ್ರಿಕೆಟ್ನಿಂದ ದೀರ್ಘಕಾಲ ಸಂಪರ್ಕ ಹೊಂದಿದ್ದೇವೆ. ಆದರೆ ಈಗ ಟೆನಿಸ್ ಮತ್ತು ಚಲನಚಿತ್ರಗಳು ನಮ್ಮನ್ನು ಸಂಪರ್ಕಿಸುತ್ತಿವೆ. ನಾವು ವಿಭಿನ್ನ ರೀತಿಯಲ್ಲಿ ಆಹಾರವನ್ನು ತಯಾರಿಸಬಹುದು ಆದರೆ ಮಾಸ್ಟರ್ಚೆಫ್ ನಮ್ಮನ್ನು ಸಂಪರ್ಕಿಸುತ್ತಿದೆ” ಎಂದಿದ್ದಾರೆ.
“ನಮ್ಮ ಕ್ರಿಕೆಟ್ ಆಧಾರಿತ ಸಂಬಂಧವು 75 ವರ್ಷಗಳನ್ನು ಪೂರೈಸಿದೆ. ಮೈದಾನದ ಪಂದ್ಯವು ಎಷ್ಟು ತೀವ್ರವಾಗಿದೆಯೋ, ನಮ್ಮ ಸಂಬಂಧವು ಮೈದಾನದ ಹೊರಗೆ ಅಷ್ಟೇ ಆಳವಾಗಿದೆ. ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಶೇನ್ ವಾರ್ನ್ ನಿಧನರಾದಾಗ ಲಕ್ಷಾಂತರ ಭಾರತೀಯರು ದುಃಖಿತರಾಗಿದ್ದರು” ಎಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಿರಂತರವಾದ ಆರ್ಥಿಕ ಸಂಬಂಧಗಳು ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಏರಿಕೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಇಂದು, ಐಎಂಎಫ್ ಭಾರತವನ್ನು ಜಾಗತಿಕ ಆರ್ಥಿಕತೆಯಲ್ಲಿ ಉಜ್ವಲ ಸ್ಥಾನವೆಂದು ಪರಿಗಣಿಸುತ್ತದೆ. ಸವಾಲು ಎದುರಾದರೂ ವಿಶ್ವ ಬ್ಯಾಂಕ್ ಭಾರತವನ್ನು ನಂಬುತ್ತದೆ. ಹಲವಾರು ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಇಂದು ತೊಂದರೆಯಲ್ಲಿದೆ ಆದರೆ ಮತ್ತೊಂದೆಡೆ, ಭಾರತದ ಬ್ಯಾಂಕ್ಗಳ ಬಲಗೊಳ್ಳುತ್ತಿರುವುದನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.