ಇಸ್ಲಾಮಾಬಾದ್: ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡುತ್ತಿರುವುದು ಪಾಕಿಸ್ಥಾನವೇ ಹೊರತು ಭಾರತವಲ್ಲ ಎಂದು ಅಮೆರಿಕಾದಲ್ಲಿ ಪಾಕಿಸ್ಥಾನದ ಮಾಜಿ ರಾಯಭಾರಿ ಹುಸೇನ್ ಹುಕ್ಕಾನಿ ಹೇಳಿದ್ದಾರೆ. ಈ ಮೂಲಕ ಪಾಕಿಸ್ಥಾನದ ನಿಜ ಬಣ್ಣ ಜಗತ್ತಿಗೆ ಅರಿವಾಗುವಂತೆ ಮಾಡಿದ್ದಾರೆ.
ಭಾರತ-ಪಾಕಿಸ್ಥಾನ ಗಡಿಯಲ್ಲಿ ಪದೇ ಪದೇ ಕದನವಿರಾಮ ಉಲ್ಲಂಘನೆಯಾಗುತ್ತಿರುವುದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಭಾರತವೇ ಕಾರಣ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಆದರೆ ವಾಸ್ತವವಾಗಿ ಪಾಕಿಸ್ಥಾನವೇ ಕದನವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಹುಸೇನ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಶಾಂತಿಯನ್ನು ಕದಡಿ ಅಶಾಂತಿ ಉಂಟು ಮಾಡಲು ಪಾಕಿಸ್ಥಾನ ಪ್ರಯತ್ನಿಸುತ್ತಿದೆ ಎಂದಿರುವ ಅವರು, ಗಡಿಯಲ್ಲಿ ಅಶಾಂತಿ ಸೃಷ್ಟಿಸುವುದರಿಂದ ಹಿಂಸಾಚಾರ, ಭಯೋತ್ಪಾದನೆ ಹೆಚ್ಚಾಗಬಹುದೇ ಹೊರತು ಪಾಕಿಸ್ಥಾನಕ್ಕಾಗಲಿ, ಭಾರತಕ್ಕಾಗಲಿ, ಕಾಶ್ಮೀರಕ್ಕಾಗಲಿ ಯಾವುದೇ ಲಾಭವಿಲ್ಲ. ಭಾರತಕ್ಕೆ ದೊಡ್ಡ ನಷ್ಟವೂ ಆಗಲಾರದು ಎಂದು ಅಭಿಪ್ರಾಯಿಸಿದ್ದಾರೆ.
ಅವರ ಈ ಹೇಳಿಕೆ ಪಾಕಿಸ್ಥಾನದ ಅಸಲಿ ಮುಖವನ್ನು ಬಯಲು ಮಾಡಿದೆ. ಅಲ್ಲದೇ ಭಾರತದ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.