ನವದೆಹಲಿ: ವಾಟ್ಸಾಪ್, ಇಮೇಲ್, ಹ್ಯಾಂಗ್ಔಟ್ಸ್ ಸಂದೇಶಗಳ ಗೂಢಲಿಪೀಕರಣಕ್ಕೆ ಹೊರಟು ವಿವಾದಕ್ಕೀಡಾದ ಕೇಂದ್ರ ಇದೀಗ ವಿವಾದದಿಂದ ಹೊರಬರಲು ಪ್ರಯತ್ನಿಸುತ್ತಿದೆ.
ಈ ಗೂಢಲಿಪಿ ನೀತಿ(ನ್ಯಾಷನಲ್ ಎನ್ಕ್ರಿಪ್ಶನ್ ಪಾಲಿಸಿ)ಯಿಂದ ವಾಟ್ಸಾಪ್, ಇಮೇಲ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಸಂದೇಶಗಳಿಗೆ ವಿನಾಯ್ತಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅಲ್ಲದೇ ಈ ವಿವಾದಾತ್ಮಕ ರಾಷ್ಟ್ರೀಯ ಗೂಢಲಿಪೀಕರಣ ನೀತಿಯನ್ನು ವಾಪಾಸ್ ಪಡೆಯಲು ಕೇಂದ್ರ ಮುಂದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಪ್ರಸ್ತಾಪಿಸಿರುವ ಗೂಢಲಿಪಿ ನೀತಿಯಂತೆ ವಾಟ್ಸಾಪ್, ಇಮೇಲ್ ಸೇರಿದಂತೆ ಹಲವು ಸಂದೇಶಗಳನ್ನು 90 ದಿನಗಳ ಕಾಲ ಡಿಲೀಟ್ ಮಾಡದೆ ಕಾಯ್ದಿರಿಸಬೇಕು. ಅಗತ್ಯ ಬಿದ್ದಲ್ಲಿ ಇದನ್ನು ಪೊಲೀಸರಿಗೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗಿತ್ತು.
ಆದರೆ ಇದು ಸಾರ್ವಜನಿಕರ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ಎಚ್ಚೆತ್ತುಕೊಂಡಿರುವ ಸರ್ಕಾರದ ವಿದ್ಯುನ್ಮಾನ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಗಳನ್ನು ಗೂಢ ಲಿಪೀಕರಣ ನೀತಿಯ ಕರಡುವಿನಿಂದ ಹೊರಗಿಡಲಾಗಿದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.