ಜಾರ್ಜಿಯಾ: ಇತಿಹಾಸದಲ್ಲಿ ಮೊದಲ ಬಾರಿಗೆ, ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಹಿಂದೂಫೋಬಿಯಾವನ್ನು ಗುರುತಿಸಿ ಯುಎಸ್ಎನ ಒಂದು ರಾಜ್ಯವಾದ ಜಾರ್ಜಿಯಾ, ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ಕೃತ್ಯ ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಆ ಬೆಳವಣಿಗೆಯೊಂದಿಗೆ, ಜಾರ್ಜಿಯಾ ಹಿಂದೂ ಫೋಬಿಯಾವನ್ನು ಗುರುತಿಸಿದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ. ಅಮೆರಿಕಾದಲ್ಲಿ ಹಿಂದೂ ವಿರೋಧಿ ಘಟನೆ ತೀವ್ರಗೊಂಡಿರುವ ನಡುವೆ ಈ ಬೆಳವಣಿಗೆ ನಡೆದಿದೆ.
ನಿರ್ಣಯವು ಜಾರ್ಜಿಯಾದಲ್ಲಿ ಭಾರತೀಯ ಅಮೆರಿಕನ್ನರು ಮತ್ತು ಹಿಂದೂ ಅಮೆರಿಕನ್ನರ ಕೊಡುಗೆಗಳನ್ನು ಗುರುತಿಸಿದೆ ಮತ್ತು ದೇಶದಾದ್ಯಂತ ಹೆಚ್ಚುತ್ತಿರುವ ಹಿಂದೂ ಫೋಬಿಯಾವನ್ನು ಖಂಡಿಸಿದೆ. ವರದಿಗಳ ಪ್ರಕಾರ, ಜಾರ್ಜಿಯಾ ರಾಜ್ಯದ ಪ್ರತಿನಿಧಿ ಲಾರೆನ್ ಮೆಕ್ಡೊನಾಲ್ಡ್ ಅವರು ಶಾಸಕಾಂಗ ಸಭೆಯಲ್ಲಿ ನಿರ್ಣಯವನ್ನು ಮಂಡಿಸಿದರು.
ನಿರ್ಣಯದಲ್ಲಿ, ಹಿಂದೂ ಧರ್ಮವು ವಿಶ್ವದ ಅತಿದೊಡ್ಡ ಮತ್ತು ಹಳೆಯ ಧರ್ಮಗಳಲ್ಲಿ ಒಂದಾಗಿದೆ, 100 ಕ್ಕೂ ಹೆಚ್ಚು ದೇಶಗಳಲ್ಲಿ 1.2 ಶತಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ ಮತ್ತು, ಪರಸ್ಪರ ಗೌರವ, ಸ್ವೀಕಾರ ಮತ್ತು ಶಾಂತಿಯ ಮೌಲ್ಯಗಳೊಂದಿಗೆ ವೈವಿಧ್ಯಮಯ ಸಂಪ್ರದಾಯಗಳು ಮತ್ತು ನಂಬಿಕೆ ವ್ಯವಸ್ಥೆಗಳನ್ನು ಹಿಂದೂ ಧರ್ಮ ಒಳಗೊಂಡಿದೆ ಎಂದು ಹೇಳಲಾಗಿದೆ.
ಅಂಡರ್ಸ್ಟ್ಯಾಂಡಿಂಗ್ ಹಿಂದೂಫೋಬಿಯಾ ಇನಿಶಿಯೇಟಿವ್ನಲ್ಲಿ ವಿವರಿಸಿದಂತೆ ಹಿಂದೂಫೋಬಿಯಾವು ಸನಾತನ ಧರ್ಮ ಮತ್ತು ಹಿಂದೂಗಳ ಬಗ್ಗೆ ಪೂರ್ವಾಗ್ರಹ, ಭಯ, ಅಥವಾ ವಿನಾಶಕಾರಿ ಮತ್ತು ಅವಹೇಳನಕಾರಿ ವರ್ತನೆಗಳನ್ನು ಒಳಗೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ನಿರ್ಣಯವು ರಟ್ಜರ್ಸ್ ವಿಶ್ವವಿದ್ಯಾನಿಲಯದ”Anti-Hindu 21 Disinformation: A Case Study of Hinduphobia on Social Media” ಎಂಬ ಶೀರ್ಷಿಕೆಯ ವರದಿಯನ್ನು ಎತ್ತಿ ತೋರಿಸಿದೆ.
#BREAKING: In a historic move, Georgia legislature passes the first ever County Resolution condemning #Hinduphobia and anti-Hindu bigotry! The resolution recognized the contributions of Indian Americans and Hindu Americans in Georgia and 1/n pic.twitter.com/J419hwtJKp
— CoHNA (Coalition of Hindus of North America) (@CoHNAOfficial) March 30, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.