ನವದೆಹಲಿ: ಭಾರತದಲ್ಲಿ ಸಂಭವಿಸುತ್ತಿರುವ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಹುತೇಕ ಭಾರತೀಯರು ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಗಂಭೀರವಾಗಿಲ್ಲ, ಅವರ ಆಲೋಚನೆ ಮತ್ತು ವರ್ತನೆ ಬದಲಾಗದಿದ್ದರೆ ಅಪಘಾತ ಕಡಿಮೆ ಮಾಡುವುದು ಕಷ್ಟ ಎಂದಿದ್ದಾರೆ.
ಭಾರತದಲ್ಲಿ 5 ಲಕ್ಷ ವಾರ್ಷಿಕ ರಸ್ತೆ ಅಪಘಾತಗಳು ಸಂಭವಿಸುತ್ತವೆ ಮತ್ತು 1.5 ಲಕ್ಷ ಸಾವುಗಳಿಗೆ ಕಾರಣವಾಗುತ್ತವೆ ಎಂದು ಗಡ್ಕರಿ ಒತ್ತಿ ಹೇಳಿದ್ದಾರೆ.
“ಭಾರತದ ಹೆಚ್ಚಿನ ಜನರು ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಬಗ್ಗೆ ಗಂಭೀರವಾಗಿಲ್ಲ, ಮತ್ತು ಅವರ ಮನಸ್ಥಿತಿ ಮತ್ತು ವರ್ತನೆ ಬದಲಾಗದ ಹೊರತು , ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಕಷ್ಟಕರವಾಗಿದೆ” ಎಂದಿದ್ದಾರೆ.
ಶಿಸ್ತಿನ ಚಾಲಕರನ್ನು ಹೊಂದುವ ಅಗತ್ಯವನ್ನು ಒತ್ತಿ ಹೇಳಿದ ಗಡ್ಕರಿ ಅವರು, ಚಾಲಕರ ಪರವಾನಗಿಗಾಗಿ ಅರ್ಜಿ ಸಲ್ಲಿಸುವವರಿಗೆ ತಮ್ಮ ಸಚಿವಾಲಯವು ಶೀಘ್ರದಲ್ಲೇ ಡಿಜಿಟಲ್ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಲಿದೆ ಮತ್ತು ನಂತರ ಪ್ರಾಯೋಗಿಕ ಚಾಲನಾ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಭಾರತದಲ್ಲಿ 22 ಲಕ್ಷ ಚಾಲಕರ ಕೊರತೆಯಿದೆ ಎಂದ ಗಡ್ಕರಿ ಅವರು, ಎಕ್ಸ್ಪ್ರೆಸ್ವೇಗಳು ಮತ್ತು ಹೆದ್ದಾರಿಗಳಲ್ಲಿ ಗರಿಷ್ಠ ವೇಗದ ಮಿತಿಯನ್ನು ಹೆಚ್ಚಿಸುವ ಪರವಾಗಿ ಇರುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.