ಕಠ್ಮಂಡು: ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಸಿಖ್ ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಭಾರತೀಯ ಪಾಸ್ಪೋರ್ಟ್ ಅಥವಾ ನಕಲಿ ಪಾಸ್ಪೋರ್ಟ್ ಮೂಲಕ ಮೂರನೇ ದೇಶಕ್ಕೆ ಪಲಾಯನ ಮಾಡಲು ಅವಕಾಶ ನೀಡಬೇಡಿ ಮತ್ತು ಆತನನ್ನು ಬಂಧಿಸಿ ಎಂದು ಭಾರತವು ನೇಪಾಳಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ನೇಪಾಳ ಸೋಮವಾರ ಆತನನ್ನು ತನ್ನ ಕಣ್ಗಾವಲು ಪಟ್ಟಿಗೆ ಸೇರಿಸಿದೆ.
ನೇಪಾಳದಲ್ಲಿನ ಭಾರತೀಯ ರಾಯಭಾರ ಕಚೇರಿಯ ಮನವಿಯ ಮೇರೆಗೆ ವಲಸೆ ಇಲಾಖೆಯು ಸಿಂಗ್ ಅನ್ನು ಕಣ್ಗಾವಲು ಪಟ್ಟಿಗೆ ಸೇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತ್ ಪಾಲ್ ಸಿಂಗ್ ನೇಪಾಳಕ್ಕೆ ಪ್ರವೇಶಿಸಿ ಅಲ್ಲಿ ಅಡಗಿ ಕುಳಿತಿರುವ ಶಂಕೆ ದಟ್ಟವಾಗಿದೆ.
ಕಠ್ಮಂಡು ಪೋಸ್ಟ್ ಪತ್ರಿಕೆಯ ವರದಿ ಪ್ರಕಾರ, ಕಾನ್ಸುಲರ್ ಸೇವೆಗಳ ಇಲಾಖೆಗೆ ಕಠ್ಮಂಡುವಿನಲ್ಲಿನ ಭಾರತೀಯ ರಾಯಭಾರ ಕಚೇರಿಯು ಕಳುಹಿಸಿರುವ ಪತ್ರದಲ್ಲಿ, ಸಿಂಗ್ ನೇಪಾಳದಿಂದ ಪಲಾಯನ ಮಾಡಲು ಪ್ರಯತ್ನಿಸಿದರೆ ಅವರನ್ನು ಬಂಧಿಸುವಂತೆ ಸರ್ಕಾರಿ ಸಂಸ್ಥೆಗಳಿಗೆ ಮನವಿ ಮಾಡಿದೆ ಎಂದು ವರದಿ ಮಾಡಿದೆ.
“ಸಿಂಗ್ ಪ್ರಸ್ತುತ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆ” ಎಂದು ಪತ್ರಿಕೆಯು ವರದಿಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.