ನವದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ “ನಾಟು ನಾಟು” ಹಾಡಿಗೆ ಜರ್ಮನ್ ರಾಯಭಾರಿ ಫಿಲಿಪ್ ಅಕರ್ಮನ್ ಅವರು ಮಾಡಿದ ನೃತ್ಯ ಪ್ರದರ್ಶನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಭಾರತದ ಬಣ್ಣಗಳು ಮತ್ತು ಸುವಾಸನೆಗಳು. ಜರ್ಮನಿಯರು ಖಂಡಿತವಾಗಿಯೂ ಅದ್ಭುತವಾಗಿ ನೃತ್ಯ ಮಾಡಬಲ್ಲರು” ಎಂದಿದ್ದಾರೆ.
ಜರ್ಮನ್ ರಾಯಭಾರಿಯವರು ತಾವು ನೃತ್ಯ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿ, ಜರ್ಮನ್ನರು ಡ್ಯಾನ್ಸ್ ಮಾಡುವುದಿಲ್ಲವೇ? ನಾನು ಮತ್ತು ನನ್ನ ಭಾರತ-ಜರ್ಮನ್ ಸ್ನೇಹಿತರು ನಾಟು ನಾಟು ವಿಜಯವನ್ನು ಸಂಭ್ರಮಿಸಿದೆವು. ಪರ್ಫೆಕ್ಟ್ ಆಗಿಲ್ಲ ಆದರೆ ಫನ್ ಆಗಿತ್ತು ಎಂದಿದ್ದಾರೆ.
ಕಳೆದ ವಾರ, ಚಲನಚಿತ್ರ ನಿರ್ಮಾಪಕ ಎಸ್ಎಸ್ ರಾಜಮೌಳಿ ಅವರ ಆಕ್ಷನ್ ಬ್ಲಾಕ್ಬಸ್ಟರ್ “ಆರ್ಆರ್ಆರ್” ಸಿನಿಮಾದ “ನಾಟು ನಾಟು” ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಚಲನಚಿತ್ರವಾಗಿ ಇತಿಹಾಸ ಬರೆದಿತ್ತು.
The colours and flavours of India! Germans can surely dance and dance well! https://t.co/NpiROYJPUy
— Narendra Modi (@narendramodi) March 20, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.