ಪಾಟ್ನಾ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಿಹಾರದ ಚಂಪಾರಣ್ನಲ್ಲಿ ಶನಿವಾರ ಬೃಹತ್ ಚುನಾವಣಾ ಸಮವೇಶವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶಕ್ಕೆ ವ್ಯಕ್ತಿಯೊಬ್ಬ ಏರ್ ಗನ್ ತಂದಿರುವುದು ಪತ್ತೆಯಾಗಿದೆ.
ವ್ಯಕ್ತಿಯ ಬಳಿ ಏರ್ ಗನ್ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣವೂ ಸೃಷ್ಟಿಯಾಯಿತು.
ಬಿಗಿ ಭದ್ರತೆಯುಳ್ಳ ಸಮಾವೇಶಕ್ಕೆ ಆತನ ಏರ್ ಗನ್ ತರಲು ಕಾರಣವೇನು? ಆತ ಯಾರು? ಆತನ ಉದ್ದೇಶವೇನು? ಎಂಬಿತ್ಯಾದಿಗಳ ಬಗ್ಗೆ ಕೂಲಂಪಕುಷ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಹಾರದಲ್ಲಿ ನರೇಂದ್ರ ಮೋದಿಯ ಸಮಾವೇಶದಲ್ಲಿ ಸ್ಫೋಟಗಳು ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.