ಭೋಪಾಲ್: 2017ರ ಭೋಪಾಲ್-ಉಜ್ಜಯಿನಿ ಪ್ರಯಾಣಿಕ ರೈಲು ಸ್ಫೋಟ ಪ್ರಕರಣದ ಎಂಟು ಅಪರಾಧಿಗಳ ಪೈಕಿ ಏಳು ಮಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮತ್ತೊಬ್ಬ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ನ್ಯಾಯಾಲಯವು ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್ ಖಾನ್, ಅಜರ್, ಅತೀಫ್ ಮುಜಾಫರ್, ಡ್ಯಾನಿಶ್, ಮೀರ್ ಹುಸೇನ್, ಆಸಿಫ್ ಇಕ್ಬಾಲ್ ಅವರಿಗೆ ಮರಣದಂಡನೆ ಮತ್ತು ಅತೀಫ್ ಇರಾಕಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಭೋಪಾಲ್ – ಉಜ್ಜಯಿನಿ ಪ್ರಯಾಣಿಕ ರೈಲು ಬಾಂಬ್ ಸ್ಫೋಟವು ಮಾರ್ಚ್ 7, 2017 ರಂದು ಸಂಭವಿಸಿದ ಭಯೋತ್ಪಾದಕ ದಾಳಿಯಾಗಿದೆ. ಜಬ್ಡಿ ನಿಲ್ದಾಣದ ಬಳಿ ಬೆಳಿಗ್ಗೆ 9.30 ರಿಂದ 10 ರ ನಡುವೆ ರೈಲಿನ ಜನರಲ್ ಕೋಚ್ನಲ್ಲಿ ಸ್ಫೋಟ ಸಂಭವಿಸಿತ್ತು.
ಶಿಕ್ಷೆಯನ್ನು ಘೋಷಿಸುವಾಗ, ನ್ಯಾಯಾಧೀಶ ವಿ ಎಸ್ ತ್ರಿಪಾಠಿ ಪ್ರಕರಣವು ಅಪರೂಪದಲ್ಲಿ ಅಪರೂಪದ ವರ್ಗಕ್ಕೆ ಸೇರಿದೆ ಮತ್ತು ಅಪರಾಧಿಗಳು ಕಠಿಣ ಶಿಕ್ಷೆಗೆ ಅರ್ಹರು ಎಂದು ಹೇಳಿದ್ದಾರೆ. ಈಗಾಗಲೇ ಐದು ವರ್ಷಗಳಿಂದ ಜೈಲಿನಲ್ಲಿರುವುದರಿಂದ ಶಿಕ್ಷೆಯನ್ನು ನೀಡುವಲ್ಲಿ ವಿನಾಯಿತಿ ತೋರಿಸಬೇಕೆಂದು ನ್ಯಾಯಾಲಯಕ್ಕೆ ಅಪರಾಧಿಗಳು ಮನವಿ ಮಾಡಿದ್ದರು. ಅಪರಾಧಿಗಳ ಮನವಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಅಪರಾಧಿಗಳು ದೇಶದ ವಿರುದ್ಧ ಯುದ್ಧವನ್ನು ನಡೆಸಿದ್ದಾರೆ. ಆದ್ದರಿಂದ ಅವರು ಯಾವುದೇ ವಿನಾಯತಿಗೆ ಅರ್ಹರಲ್ಲ ಎಂದು ಹೇಳಿದೆ.
February:
– 8 ISIS terrorists convicted in 2017 Kanpur terror case. They're also accused in Bhopal-Ujjain train blast
– 3 Lashkar terrorists got life term for 2008 CRPF attack
– ISIS terrorist Sirajuddin got 7 years jail
– 2 Lashkar terrorists jailed up to 5 years in Srinagar
— Anshul Saxena (@AskAnshul) February 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.