ಕೋಲ್ಕತ್ತಾ: ಬಹು ಕಾಲದ ಬೇಡಿಕೆಗೆ ಮಣಿದಿರುವ ಪಶ್ಚಿಮಬಂಗಾಳ ಸರ್ಕಾರ ಕೊನೆಗೂ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಒಟ್ಟು 64ದಾಖಲೆಗಳನ್ನು ಶುಕ್ರವಾರ ಬಹಿರಂಗಪಡಿಸಿದೆ.
ನೇತಾಜೀ ಕುಟುಂಬ ಸದಸ್ಯರಿಗೆ ಈ ದಾಖಲೆಗಳನ್ನು ಹಸ್ತಾಂತರ ಮಾಡಲಾಗಿದ್ದು, ಸಾರ್ವಜನಿಕ ವೀಕ್ಷಣೆಗೆ ಸೋಮವಾರದಿಂದ ಇದು ಲಭ್ಯವಾಗಲಿದೆ.
‘ಇದರಲ್ಲಿ ಒಟ್ಟು 64 ಕಡತಗಳಿದ್ದು, 127೪44 ಪುಟಗಳನ್ನು ಹೊಂದಿದೆ, ಎಲ್ಲಾ ಕಡತಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ’ ಎಂದು ಕೋಲ್ಕತ್ತಾ ಪೊಲೀಸ್ ಕಮಿಷನರ್ ಸುರ್ಜೀತ್ ಕಾರ್ ಪುರ್ಕಯಾಸ್ತು ತಿಳಿಸಿದ್ದಾರೆ.
ಕಡತಗಳ ಹಸ್ತಾಂತರ ಸಮಾರಂಭದಲ್ಲಿ ನೇತಾಜೀ ಕುಟುಂಬದ ಹಲವಾರು ಸದ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆದೇಶದಂತೆ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ.
ಆದರೆ ಸಮಾರಂಭಕ್ಕೆ ಮಮತಾ ಗೈರಾಗಿದ್ದರು. ಅವರ ಪ್ರತಿನಿಧಿಗಳೂ ಭಾಗವಹಿಸಿರಲಿಲ್ಲ. ಸಮಾರಂಭವನ್ನು ರಾಜಕೀಯಗೊಳಿಸಲು ಇಚ್ಛಿಸದ ಕಾರಣ ಅವರು ಗೈರಾಗಿದ್ದಾರೆ ಎನ್ನಲಾಗಿದೆ.
1937 ರಿಂದ 1947ರವರಿಗಿನ ನೇತಾಜೀ ಮಾಹಿತಿಗಳು ಈ ಕಡತಗಳಲ್ಲಿದೆ ಎನ್ನಲಾಗಿದ್ದು, ಅವರ ನಿಗೂಢ ಸಾವಿನ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.