ವಾಷಿಂಗ್ಟನ್: ತನ್ನ ಬಳಕೆದಾರರ ಬಹಳ ವರ್ಷಗಳ ಬೇಡಿಕೆಯ ಮೇರೆಗೆ ಫೇಸ್ಬುಕ್ ಕೊನೆಗೂ ‘ಡಿಸ್ಲೈಕ್’ ಬಟನ್ನನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ಫೇಸ್ಬುಕ್ ಸಿಇಓ ಮಾರ್ಕ್ ಝಕನ್ಬರ್ಗ್ ಅಧಿಕೃತ ಘೋಷಣೆ ಮಾಡಿದ್ದಾರೆ.
‘ಡಿಸ್ಲೈಕ್ ಬಟನ್ಗೆ ಜನ ಹಲವಾರು ವರ್ಷಗಳಿಂದ ಬೇಡಿಕೆಯಿಟ್ಟಿದ್ದರು, ಇಂದು ವಿಶೇಷ ದಿನ, ಯಾಕೆಂದರೆ ಈ ದಿನ ‘ಡಿಸ್ಲೈಕ್ ಬಟನ್’ ಪರಿಚಯಿಸುವ ಕಾರ್ಯದಲ್ಲಿ ನಾವು ತೊಡಗಿದ್ದೇವೆ ಎಂದು ಘೋಷಿಸುತ್ತಿದ್ದೇನೆ’ ಎಂದು ಝಕನ್ಬರ್ಗ್ ಹೇಳಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಫೇಸ್ಬುಕ್ನಲ್ಲಿ ‘ಲೈಕ್ ಬಟನ್’ ಇದೆ, ಆದರೆ ಇದು ಎಲ್ಲಾ ಪೋಸ್ಟ್ಗಳಿಗೂ ಹೊಂದಾಣಿಕೆ ಆಗುವುದಿಲ್ಲ. ಎಲ್ಲಾ ಸಂದರ್ಭವೂ ಒಳ್ಳೆಯ ಸಂದರ್ಭ ಆಗಿರುವುದಿಲ್ಲ. ಸಂತ್ರಸ್ಥರ ಬಿಕ್ಕಟ್ಟಿನ ಬಗ್ಗೆ ಪೋಸ್ಟ್ ಹಾಕಿದಾಗ ಅದನ್ನು ಲೈಕ್ ಮಾಡುವುದು ಸಮಂಜಸ ಎನಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಡಿಸ್ಲೈಕ್ ಬಟನ್ ತರಲು ಇಚ್ಛಿಸಿದ್ದೇವೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.