ನವದೆಹಲಿ: ಭಾರತದ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಗುಜರಾತ್ ಅಗ್ರ ಸ್ಥಾನದಲ್ಲಿದ್ದರೆ, ಕರ್ನಾಟಕ 9ನೇ ಸ್ಥಾನದಲ್ಲಿದೆ.
ದೇಶದ ರಾಜ್ಯಗಳಲ್ಲಿ ಉದ್ಯಮಕ್ಕೆ ಇರುವ ಅನುಕೂಲಕರವಾದ ವಾತಾವರಣವನ್ನು ಆಧರಿಸಿ ವಿಶ್ವಬ್ಯಾಂಕ್ ‘ಉದ್ಯಮ ಸುಧಾರಣೆಗಾಗಿ ರಾಜ್ಯಗಳು ಕೈಗೊಂಡ ಮೌಲ್ಯ ಮಾಪನ’ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ನೀಡಿದೆ.
ಈ ಪಟ್ಟಿಯಲ್ಲಿ ಗುಜರಾತ್ ನಂಬರ್.1 ಆದರೆ, ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ಮೂರನೇ ಸ್ಥಾನದಲ್ಲಿ ಜಾರ್ಖಾಂಡ್ ಇದೆ. ಛತ್ತೀಸ್ಗಢ ಕೂಡ ಕರ್ನಾಟಕಕ್ಕಿಂತ ಮೇಲಿನ ಸ್ಥಾನವನ್ನು ಪಡೆದುಕೊಂಡಿದೆ.
ಉದ್ಯಮ ಆರಂಭಕ್ಕೆ ಇರುವ ವಾತಾವರಣ, ಜಮೀನು ಮಂಜೂರು, ಕಾರ್ಮಿಕ ಸುಧಾರಣೆ, ಮೂಲಸೌಕರ್ಯ, ತೆರಿಗೆ ಮುಂತಾದುವುಗಳನ್ನು ಗಮನಿಸಿ ಈ ವರದಿಯನ್ನು ತಯಾರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.