ನವದೆಹಲಿ : ಹಲವಾರು ಸಮುದಾಯದ ಪ್ರಯತ್ನಗಳು ಸೇರಿದಂತೆ ಇತ್ತೀಚಿನ ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮದ ಸಂಚಿಕೆಯಲ್ಲಿ ಒಳಗೊಂಡಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮನ್ ಕಿ ಬಾತ್ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಧಾನಿ ಟ್ವೀಟ್ ಮಾಡಿದ್ದು,“ಈ ತಿಂಗಳ ಮನ್ ಕೀ ಬಾತ್ನಲ್ಲಿ ನಾವು ಹಲವಾರು ಸಮುದಾಯ ಪ್ರಯತ್ನಗಳನ್ನು ಒಳಗೊಂಡಂತೆ ವೈವಿಧ್ಯಮಯ ವಿಷಯಗಳನ್ನು ವಿಚಾರ ಮಂಥನ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ NaMo ಅಪ್ಲಿಕೇಶನ್ನಲ್ಲಿ ಮನ್ ಕೀ ಬಾತ್ ಕ್ವಿಜ್ ಏರ್ಪಡಿಸಲಾಗಿದ್ದು, ಇದರಲ್ಲಿ ಭಾಗವಹಿಸಿ” ಎಂದಿದ್ದಾರೆ.
ತಮ್ಮ ಕಾರ್ಯಕ್ರಮದಲ್ಲಿ ಮೋದಿಯವರ ಅನೇಕರು ಮಾಡಿದ ಸಾಧನೆಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇವುಗಳ ಬಗ್ಗೆ ಕ್ವಿಜ್ನಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಇದಕ್ಕಾಗಿ NaMo ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಿ 10 ಪ್ರಶ್ನೆಗಳಿಗೆ ಉತ್ತರಿಸಬಹುದು. ರಸಪ್ರಶ್ನೆಯು ಡಿಸೆಂಬರ್ 11 ರವರೆಗೆ ಲೈವ್ ಆಗಿರುತ್ತದೆ. ಹತ್ತು ಅದೃಷ್ಟಶಾಲಿ ವಿಜೇತರು ಮೋದಿ ಹಸ್ತಾಕ್ಷರದ ಪುಸ್ತಕಗಳನ್ನು ಸ್ವೀಕರಿಸಲಿದ್ದಾರೆ.
We covered diverse topics during this month’s #MannKiBaat including several community efforts. Do take part in the MKB Quiz on the NaMo App. pic.twitter.com/BkB1Qcx6iP
— Narendra Modi (@narendramodi) November 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.