ನವದೆಹಲಿ: ತಂತ್ರಜ್ಞಾನ ಕಂಪನಿ ಮೆಟಾ ಕುರಿತ ವರದಿಗಾಗಿ ವೆಬ್ಸೈಟ್ ʼದಿ ವೈರ್ʼ ಮತ್ತು ಅದರ ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಪೋರ್ಟಲ್ನ ಸಂಪಾದಕರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ನಕಲಿ), 469 (ಪ್ರತಿಷ್ಠೆಗೆ ಹಾನಿ ), 471 (ಖೋಟಾ ದಾಖಲೆ ಬಳಕೆ), 500 (ಮಾನನಷ್ಟ), 120B (ಕ್ರಿಮಿನಲ್ ಪಿತೂರಿ), ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಿ ವೈರ್ನ ಸಂಸ್ಥಾಪಕ ಸಂಪಾದಕ ತ್ರಿಮೂರ್ತಿ ಸಿದ್ಧಾರ್ಥ್ ವರದರಾಜನ್, ಸಿದ್ಧಾರ್ಥ್ ಭಾಟಿಯಾ ಮತ್ತು ಎಂ ಕೆ ವೇಣು ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಾರ್ಕ್ವಾದಿ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅವರ ಪುತ್ರಿ ಉಪ ಸಂಪಾದಕ ಜಾಹ್ನವಿ ಸೇನ್ ಅವರ ಹೆಸರನ್ನೂ ವರದಿಯಲ್ಲಿ ಸೇರಿಸಲಾಗಿದೆ.
ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರ ದೂರಿನ ನಂತರ ಎಫ್ಐಆರ್ ದಾಖಲಿಸಲಾಗಿದೆ.
ಅಕ್ಟೋಬರ್ 10 ರಂದು ಪ್ರಕಟವಾದ ಸ್ಟೋರಿಯಲ್ಲಿ, ಮಾಲ್ವಿಯಾ ಅವರು ಇನ್ಸ್ಟಾಗ್ರಾಮ್ನೊಂದಿಗೆ ಅಸಾಧಾರಣ ಸವಲತ್ತುಗಳನ್ನು ಹೊಂದಿದ್ದಾರೆ ಮತ್ತು ಮೋದಿ ಸರ್ಕಾರದ ಟೀಕೆಗಳನ್ನು ಹತ್ತಿಕ್ಕಲು ಅಧಿಕಾರ ಹೊಂದಿದ್ದಾರೆ ಎಂದು ದಿ ವೈರ್ ಆರೋಪಿಸಿತ್ತು.
ಸುದ್ದಿ ವೆಬ್ಸೈಟ್ ನಕಲಿ ಸ್ಕ್ರೀನ್ಶಾಟ್ಗಳು ಮತ್ತು ಇಮೇಲ್ಗಳನ್ನು ರಚಿಸಿ ತನ್ನ ವರದಿಯನ್ನು ನಿಜವೆಂದು ಸಾಬೀತುಪಡಿಸಲು ಮುಂದಾಗಿತ್ತು
ಆದರೆ ಟೀಕೆಗಳು ವ್ಯಕ್ತವಾದಾಗ ಕ್ಷಮಾಪಣೆ ಕೇಳಿ ಮೌನವಾಗಿತ್ತು. ದಿ ವೈರ್ನ ಈ ಧೋರಣೆಯನ್ನು ಖಂಡಿಸಿ ಅಮಿತ್ ಮಾಳವೀಯಾ ಅವರು ಪ್ರಕರಣ ದಾಖಲಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.