ಶ್ರೀನಗರ: ಬಿಜೆಪಿ ಶಾಸಕರೊಬ್ಬರು ತಮ್ಮ ಭದ್ರತಾ ಸಿಬ್ಬಂದಿಯ ಹೆಗಲ ಮೇಲೆ ಕೂತು ಹೊಳೆ ದಾಟುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಸುದ್ದಿ ಮಾಡಿದೆ. ರಾಜಕಾರಣಿಗಳು ಅಧಿಕಾರದ ಮದದಲ್ಲಿ ಯಾವ ರೀತಿಯ ಅಹಂಕಾರ ಪ್ರದರ್ಶಿಸುತ್ತಾರೆ ಎಂಬುದಕ್ಕೆ ಈ ಫೋಟೋ ಉತ್ತಮ ಉದಾಹರಣೆಯಾಗಿದೆ.
ನೀರಲ್ಲಿ ಕಾಲು ಮುಳುಗಿಸಿ ಹೊಳೆ ದಾಟಲು ಪ್ರತಿಷ್ಠೆ ಬಿಡದ ಕೃಷ್ಣಲಾಲ್ ಎಂಬ ಶಾಸಕ ತನ್ನ ಭದ್ರತಾ ಸಿಬ್ಬಂದಿಯ ಹೆಗಲ ಮೇಲೆ ಕೂತು ಹೊಳೆ ದಾಟಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾದರೂ ತನ್ನ ಕ್ರಮವನ್ನು ಅವರು ಸಮರ್ಥಿಕೊಂಡಿದ್ದಾರೆ.
‘ಆತ ನನ್ನ ಭದ್ರತಾ ಸಿಬ್ಬಂದಿ, ನನಗೆ ಸಹಾಯ ಮಾಡಲೆಂದೇ ಸರ್ಕಾರದಿಂದ ನಿಯೋಜಿತಗೊಂಡವನು. ಹೊಳೆ ದಾಟಲು ಸಹಾಯ ಮಾಡಿರುವುದರಲ್ಲೇನು ತಪ್ಪಿದೆ’ ಎಂದು ಕೃಷ್ಣಲಾಲ್ ಪ್ರಶ್ನಿಸಿದ್ದಾರೆ.
ಅಲ್ಲದೇ ‘ಇದು ಜೀತದಾಳುವಿನ ಪ್ರತೀಕವಲ್ಲ, ಅಧಿಕಾರದ ದುರ್ಬಳಕೆಯೂ ಅಲ್ಲ, ಆತ ನನಗೆ ಸಹಾಯ ಮಾಡಲು ಸ್ವಯಂಪ್ರೇರಿತನಾಗಿಯೇ ಬಂದ’ ಎಂದು ಅವರು ಹೇಳಿದ್ದಾರೆ.
ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರೊಬ್ಬರು ತನ್ನ ಭದ್ರತಾ ಸಿಬ್ಬಂದಿಯ ಹೆಗಲಲ್ಲಿ ಕೂತು ಹೊಳೆ ದಾಟಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.