ನವದೆಹಲಿ: “DefExpo2022 ನವ ಭಾರತದ ಭವ್ಯ ಚಿತ್ರವನ್ನು ಪ್ರದರ್ಶಿಸುತ್ತಿದೆ, ಇದಕ್ಕಾಗಿ ನಾವು ಅಮೃತ ಕಾಲದ ಸಂಕಲ್ಪವನ್ನು ತೆಗೆದುಕೊಂಡಿದ್ದೇವೆ. ಇದು ರಾಷ್ಟ್ರದ ಅಭಿವೃದ್ಧಿ, ರಾಜ್ಯಗಳ ಭಾಗವಹಿಸುವಿಕೆ, ಯುವ ಶಕ್ತಿ, ಯುವ ಕನಸುಗಳು, ಯುವ ಧೈರ್ಯ ಮತ್ತು ಯುವಕರ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂದು ಗುಜರಾತ್‌ನ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ 2022 ಅಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 52 ವಿಂಗ್ ಏರ್ ಫೋರ್ಸ್ ಸ್ಟೇಷನ್ ಡೀಸಾಗೆ ಶಂಕುಸ್ಥಾಪನೆ ಮಾಡಿದರು. ಪ್ರ
ಧಾನಿ ಮೋದಿ ಅವರು ಗುಜರಾತ್‌ಗೆ ಎರಡು ದಿನಗಳ ಪ್ರವಾಸದಲ್ಲಿದ್ದು, ಅಲ್ಲಿ ಅವರು ರಾಜ್ಯದ ಗಾಂಧಿನಗರ, ಜುನಾಗಢ್, ರಾಜ್‌ಕೋಟ್, ನರ್ಮದಾ ಮತ್ತು ತಾಪಿ ಜಿಲ್ಲೆಗಳಲ್ಲಿ 15,670 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
“ದೇಶದ ಅತಿದೊಡ್ಡ ಡಿಫೆನ್ಸ್ ಎಕ್ಸ್‌ಪೋ ಹೊಸ ಭವಿಷ್ಯದ ಆರಂಭವನ್ನು ಗುರುತಿಸಿದೆ. ಇದು ಕೆಲವು ದೇಶಗಳಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ನನಗೆ ತಿಳಿದಿದೆ ಆದರೆ ಸಕಾರಾತ್ಮಕ ಮನಸ್ಥಿತಿಯೊಂದಿಗೆ ಹಲವಾರು ದೇಶಗಳು ನಮ್ಮೊಂದಿಗೆ ಬಂದಿವೆ” ಎಂದಿದ್ದಾರೆ.
“ಭಾರತವು ಭವಿಷ್ಯದ ಈ ಅವಕಾಶಗಳಿಗೆ ಆಕಾರವನ್ನು ನೀಡುತ್ತಿರುವಾಗ, ಭಾರತದ ಸ್ನೇಹಿತರಾಗಿರುವ 53 ಆಫ್ರಿಕನ್ ರಾಷ್ಟ್ರಗಳು ನಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು ನನಗೆ ಸಂತೋಷ ತಂದಿದೆ” ಎಂದು ಅವರು ಹೇಳಿದರು.
ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡಲು, ಭಾರತದ ಅತಿದೊಡ್ಡ ರಕ್ಷಣಾ ಪ್ರದರ್ಶನ – DefExpo 2022 ಅನ್ನು ಗುಜರಾತ್‌ನ ಗಾಂಧಿನಗರದಲ್ಲಿ ಆಯೋಜಿಸಲಾಗಿದೆ. ಇದು `ಹೆಮ್ಮೆಯ ಹಾದಿ~ ಎಂಬ ವಿಷಯದ ಮೇಲೆ ಆಯೋಜಿಸಲಾದ ಈವೆಂಟ್‌ನ 12 ನೇ ಆವೃತ್ತಿಯಾಗಿದೆ. ಇಂಡಿಯಾ ಪೆವಿಲಿಯನ್‌ನಲ್ಲಿ, ಪ್ರಧಾನಿಯವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿದ ಸ್ಥಳೀಯ ತರಬೇತುದಾರ ವಿಮಾನವಾದ HTT-40 ಅನ್ನು ಅನಾವರಣಗೊಳಿಸಿದರು.
The biggest Defence Expo of the country so far has marked an emphatic beginning of a new future. I know that this has also caused inconvenience to some countries but several countries, with a positive mindset, have come with us: PM Modi at #DefExpo2022 in Gandhinagar, Gujarat. pic.twitter.com/sNa63xfPp7
— ANI (@ANI) October 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.